ಮಹಾನಗರ ಪಾಲಿಕೆ ಸದಸ್ಯರ ಜೊತೆ ಸಭೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಜ-9 ರಂದು ಗುಮ್ಮಟ ನಗರಿ ಮೆಯರ್, ಉಪ ಮೇಯರ್ ಚುನಾವಣೆ..!
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರ ಜೊತೆ ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ತಡರಾತ್ರಿ ಸಭೆ ನಡೆಸಿದರು. ನಿಗದಿತ ಕಾರ್ಯಕ್ರಮದ ಬಳಿಕ ವಿಜಯಪುರ ನಗರದ ವಾರ್ಡ್ ನಂಬರ್ 12ರ ಪಾಲಿಕೆ ಸದಸ್ಯೆ ರಶ್ಮಿ ಕೋರಿ ನಿವಾಸದಲ್ಲಿ ಸಭೆ ಮಾಡಿದರು. ವಿಜಯೇಂದ್ರ ನೇತೃತ್ವದ ಕಾರ್ಯಕರ್ತರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆ ಸದಸ್ಯರು ಆಗಮಿಸದ ಹಿನ್ನೆಲೆ ಪ್ರತ್ಯೇಕವಾಗಿ ಭೇಟಿಯಾಗುವ ಪ್ರಸ್ತಾಪವನ್ನು ಸದಸ್ಯರು ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ವಿಜಯೆಂದ್ರನ್ನು ಭೇಟಿ ಮಾಡಿದರು. ಯತ್ನಾಳ್ ಹಾಗೂ ಯಡಿಯೂರಪ್ಪ, ತಮ್ಮ ನಡುವಿನ ಭಿನ್ನಾವಿಪ್ರಾಯ ಬಗೆಹರಿಸುಕೊಳ್ಳುವಂತೆ ಮನವಿ ಮಾಡಿದರು. ಇಬ್ಬರ ಶೀತಲ ಸಮರದಲ್ಲಿ ಸದಸ್ಯರಿಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸದಸ್ಯರು ಮನವಿ ಮಾಡಿದರು. ಈ ಬಗ್ಗೆ ಕೇಂದ್ರದವರು ನಿರ್ಧಾರ ಮಾಡುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ. ಅಲ್ಲದೇ, ಯತ್ನಾಳ್ ನೇತೃತ್ವದಲ್ಲಿ ಅತೀ ಹೆಚ್ಚು ಮಹಾನಗರ ಪಾಲಿಕೆ ಸದಸ್ಯರು ಗೆಲುವು ಸಾಧಿಸಿದ್ದಾರೆಂದು ಯತ್ನಾಳ ಪರ ಮಾತನಾಡಿದ ಸದಸ್ಯ ಪ್ರೇಮಾನಂದ ಬಿರಾದಾರ್, ರಾಹುಲ್ ಜಾಧವ್ ಹಾಗೂ ಇತರ ಸದಸ್ಯರು. 35 ಸದಸ್ಯರ ಬಲದ ಪಾಲಿಕೆ ಚುಕ್ಕಾಣಿ ಹಿಡಿಯಲು ಎಲ್ಲರೂ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು. ಪಾಲಿಕೆ ಸದಸ್ಯರ ಒತ್ತಾಯದ ಮೇರೆಗೆ ಓರ್ವ ಜೆಡಿಎಸ್ ಸದಸ್ಯನ ಬೆಂಬಲ ನೀಡಬೇಕೆಂದು ಕುಮಾರಸ್ವಾಮಿಗೆ ವಿಜಯೇಂದ್ರ ಕರೆ ಮಾಡಿದರು. ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾಗಿರುವ ಓರ್ವ ಜೆಡಿಎಸ್ ಸದಸ್ಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತಚಲಾಯಿಸುವಂತೆ ಜೆಡಿಎಸ್ ಸದಸ್ಯನಿಗೆ ನಿರ್ದೇಶನ ನೀಡಬೇಕೆಂದು ಕುಮಾರಸ್ವಾಮಿಗೆ ಮನವಿ ಮಾಡಿದರು. ಇದೇ ಜನೇವರಿ 9 ರಂದು ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಲಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನ ಹಾಗೂ ಎಸ್ ಟಿ ವರ್ಗಕ್ಕೆ ಉಪಮೇಯರ ಸ್ಥಾನ ಮೀಸಲಾತಿ ಆಗಿದೆ.