ಗುಬ್ಬೇವಾಡ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಹಾಗೂ ಗೌರವ..!
ನಮ್ಮ ಗುರಿ ಗ್ರಾಮದ ಅಭಿವೃದ್ಧಿ ಕಡೆ ; ನೂತನ ಅಧ್ಯಕ್ಷ ಶಾರದಾಬಾಯಿ..
ಇಂಡಿ : ಗುಬ್ಬೇವಾಡ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ತಳವಾರ ಸಮಾಜವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹೌದು ಎರಡನೇ ಅವಧಿಗೆ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಶಾರದಾಬಾಯಿ ಸಿದ್ದಪ್ಪ ಮರಗೂರ ಹಾಗೂ ಉಪಾಧ್ಯಕ್ಷ ಅನೀತಾ ಆನಂದ ಚಾಂದಕವಟೆ ಮತ್ತು ಸದಸ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಸುರೇಶ್ ಆಲೂರ ಮಾತಾನಾಡಿದ ಅವರು, ಸುಮಾರು 70 ರಿಂದ 75 ವರ್ಷ ಗತಿಸಿದ್ರೂ ನಮ್ಮೂರಿಗೆ ಅಧ್ಯಕ್ಷರ ಪಟ್ಟ ಒಲದಿಲ್ಲ. ಆದರೆ ಈ ಬಾರಿ ನಮ್ಮೂರ ಜನರ ಸಹಕಾರ ಮತ್ತು ಶಿರಗೂರ ಇನಾಂ ಹಾಗೂ ಚಿಕ್ಕ ಮಣ್ಣೂರ ಸದಸ್ಯರ ಕಾಳಜಿಯಿಂದ ನಮ್ಮೂರಿಗೆ ಅಧ್ಯಕ್ಷ ಪಟ್ಟ ಸಿಕ್ಕಿದೆ. ಹಾಗಾಗಿ ನಮ್ಮೂರಿನಂತೆ ಚಿಕ್ಕ ಮಣ್ಣೂರ ಮತ್ತು ಶಿರಗೂರ ಇನಾಂ ಗ್ರಾಮಗಳನ್ನು ಕೂಡಾ ಅತೀ ಕಾಳಜಿವಹಿಸಿ ಅಭಿವೃದ್ಧಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡ ಧರ್ಮಣ ಕೋಳಿ, ಪಂಚಪ್ಪ ಕೋಳಿ.ಯಲ್ಲಪ್ಪ ಕೋಳಿ. ಶಿವಲಿಂಗ ಕೋಳಿ ಹಾಗೂ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.