ಕೌದಳ್ಳಿಯಲ್ಲಿ ಶ್ರೀ ರಾಮಚಂದ್ರಪುರ ಮಠದ ಗೋಫಲ ಟ್ರಸ್ಟ್ ನ ವತಿಯಿಂದ ಗೋಶಾಲೆ ಪ್ರಾರಂಭ..
ಹನೂರು : ಶ್ರೀ ಕ್ಷೇತ್ರದ ನೂತನವಾಗಿ ಪ್ರಾರಂಭಿಸಿರುವ ಗೋಫಲ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀ ಯುತ ಮುಳಿಯ ಕೇಶವ ಪ್ರಸಾದ್ ಮಾತನಾಡಿ ನಾವು ಪ್ರಾರಂಭ ಮಾಡಿದ ಗೋಫಲ ಟ್ರಸ್ಟ್ ನ ಒಟ್ಟು ಲಾಭಾಂಶದ ಹಣವನ್ನು ವ್ಯಯ ಮಾಡದೆ ಎರಡು ಗೋಶಾಲೆಗಳನ್ನು ಮಾಡಿದ್ದೇವೆ. ಅದರಲ್ಲಿ ಇದು ಒಂದಾಗಿದೆ,ನಮ್ಮಲ್ಲಿನ ನಾಟಿ ಹಸುವಿನ ಹಾಲಿನಿಂದ ಮನುಷ್ಯನ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು . ಈಗಾಗಲೇ ನಮ್ಮ ಟ್ರಸ್ಟ್ ನಿಂದ ನಾಟಿವೈದ್ಯರನ್ನು ಗುರುತಿಸಿ ಸರ್ಕಾರದಿಂದ ಗುರುತಿನ ಚೀಟಿ ನೀಡಲು ಸರ್ಕಾರದ ಗಮನ. ಸೆಳೆಯಲು ಪ್ರಯತ್ನಿಸಲಾಗುವುದು.ನಮ್ಮ ಸಂಸ್ಥೆಯು ಇಂದು ಎರಡನೆ ಘಟಕವನ್ನು ಪ್ರಾರಂಭಿಸಿದ್ದೇವೆ. ನಮ್ಮ ಸಂಸ್ಥೆಯು ಇನ್ನು ಎತ್ತರಕ್ಕೆ ಬೆಳೆಯುವಂತಾಗಿ ಎಂದು ತಿಳಿಸಿದರು.
ಕೌದಳ್ಳಿ ಗ್ರಾಮದ ಹೊರವಲಯದಲ್ಲಿ ನೂತನವಾಗಿ ಪ್ರಾರಂಭಿಸಿರುವ ಗೋಫಲದ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಡಾಕ್ಟರ್ ಪ್ರಕಾಶ್ ಸಾಮನ್ಯವಾಗಿ ನಾಟಿ ಹಸುಗಳಲ್ಲಿ ಗುಳ್ಳೆಗಳಾದರೆ ಅದು ಸುಲಭವಾಗಿ ವಾಸಿಯಾಗುತ್ತದೆ, ಇದಕ್ಕೆ ಗ್ರಾಮಗಳಲ್ಲೆ ಔಷದಿ ತಯಾರಿಸಿಕೊಳ್ಳಬಹುದು ಉದಾಹರಣೆಗೆ ಹತ್ತು ವಿಳ್ಯದೆಲೆ , ಹತ್ತು ಗ್ರಾಂ ಅರಿಸಿನ ಪುಡಿ ,ಹತ್ತು ಕಾಳುಮೆಣಸು ,ಉಪ್ಪುಗಳನ್ನು ಮಿಶ್ರಣ ಮಾಡಿ 15 ದಿನ ನೀಡಿದರೆ, ಅದು ಸಂಪೂರ್ಣವಾಗಿ ವಾಸಿಯಾಗುತ್ತದೆ. ಹೋಮಿಯೋಪತಿ ಚಿಕಿತ್ಸಾ ಸುಲಭವಾಗಿ ತಲುಪಿಸಬಹುದು ಇಂಗ್ಲಿಷ್ ಔಷಧಿಯನ್ನು ತಿಂಗಳಗಟ್ಟಲೆ ಮಾಡಬೇಕಾಗುತ್ತದೆ . ಜಾನುವಾರುಗಳಿಗೆ
ವೈರಸ್ ನಿಂದ ಬರುವ ರೋಗವನ್ನು ಕಡಿಮೆ ಮಾಡಬಹುದು ಅಷ್ಟೇ, ಆದರೆ ಪೂರ್ತಿಯಾಗಿ ಗುಣಪಡಿಸಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದರು .
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕೌದಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸ್ವಾಮಿ ಮಾತನಾಡಿ ನಮ್ಮ ಭಾಗದಲ್ಲಿ ಗೋಕರ್ಣದಿಂದ ಬಂದು ರೈತರ ಜೊತೆಗೂಡಿ ಗೋಫಲ ಟ್ರಸ್ಟ್ ಘಟಕ ವನ್ನು ಪ್ರಾರಂಭಿಸುತ್ತಿರುವುದು ನಮ್ಮಲ್ಲರಿಗೂ ಸಂತೋಷದ ವಿಷಯವಾಗಿದೆ.ಹಾಗೂ ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 22 ಜಾನುವಾರುಗಳ ತೊಟ್ಟಿಯನ್ನು ನಿರ್ಮಾಣ ಮಾಡಿದ್ದೇವೆ. ಹಲವು ಕಡೆ ರೈತರಿಗೆ ದಾರಿ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇವೆ ಎಂದು ತಿಳಿಸಿದರು .
ಕಾರ್ಯಕ್ರಮದ ಉಧ್ಘಾಟಕರಾದ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಕೆ ವಿ ಮಾದೇಶ್ ಮಾತನಾಡಿ ತಮ್ಮ ಜೀವನವೆಲ್ಲ ರಾಮ ಮತ್ತು ಗೋವಿನ ಪೂಜೆಗೆ ಮಿಸಲಿರಿಸಿದ ರಾಮಚಂದ್ರಪುರದ ಮಠದ ಸ್ವಾಮೀಜಿಗಳು ಗೋವುಗಳಿಗಾಗಿಯೆ ಮುಡಿಪಾಗಿಟ್ಟಿದ್ದಾರೆ.ನಮ್ಮ ಭಾಗದ ರೈತರು ದನದಿಂದ ಆರ್ಥಿಕ ಮೂಲವನ್ನು ಕಂಡುಹಿಡಿಯಲು ಪ್ರಾರಂಭಿಸಬೇಕು. ಮೇವಿನ ಬರಗಾಲ ಬಂದಾಗ 2017 ರಲ್ಲಿ ಗೋವಿಗೆ ಮೇವಿನ ಮಹತ್ವ ಜನರಿಗೆ ತಿಳಿಯಿತು ಇದರಿಂದ ಒಂದು ಮನೆಯಲ್ಲಿ ಹಸುವಿನ ಹಾಲು ಕರೆದರೆ ಅಲ್ಲಿ ದರಿದ್ರ ಕಾಣಿಯಾಗುತ್ತದೆ.ಗೋವಿನ ಲಾಭವನನ್ನು ನೋಡಿದಾಗ ನಮಗೆ ಸಂತೋಷ ಕಾಣುತ್ತದೆ, ಗೋವುಗಳಲ್ಲಿ ನಮ್ಮ ಕುಟುಂಬದಲ್ಲೊಬ್ಬರಾಗಿದ್ದಾರೆ ಎಂದು ನಮಗೆ ತಿಳಿದರೆ ಹಸು ಸಾಕಲು ಸುಲಭವಾಗುತ್ತದೆ. ಭೂಮಿ ಮತ್ತು ಹಸುವಿನಿಂದ ಯಾವುದೇ ಫಲಪೇಕ್ಷೆ ಬಯಸಿದೆ ದುಡಿಯಬೇಕು ಆಗ ಮಾತ್ರ ಒಳಿತು ಸಾಧ್ಯ, ಗೋಸ್ವರ್ಗವನ್ನು ಮಾಡಲು ನಾವೆಲ್ಲರು ಸಮಯ ನೀಡೊಣವೆಂದು ತಿಳಿಸಿದರು.
ನಂತರ ಮಾತನಾಡಿದ ಕೆ ವಿ ಸಿದ್ದಪ್ಪ ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರಗೂರು ಬೆಟ್ಟದ ತಳಿಗಳು ನಸಿಸಿಹೋಗುವಾಗ ದ್ಯಾನ್ ಪೌಂಡೆಷನ್ ಹಾಗೂ ರಾಮಚಂದ್ರಪುರದ ಮಠದ ಜೊತೆಯಲ್ಲಿ ಹಾಗೂ ಹಿಂದಿನ ಡಿಸಿ ರಾಮು ರವರು ಇದ್ದಾಗ ದೇಸಿಯ ತಳಿ ಒಂದು ಲಕ್ಷದ ಇಪ್ಪತ್ತು ಸಾವಿರ ಹಸುಗಳಿವೆ ಎಂದು ಮನವರಿಕೆ ಮಾಡಿ ವರದಿ ನೀಡಿದ್ದೆವು. ಐದು ವರ್ಷದಲ್ಲಿ ಗೋವುಗಳ ಸಂಖ್ಯೆಕಡಿಮೆಯಾಗಿದೆ ಅದಕ್ಕೆ ಕಾರಣ ಮೇವಿನ ಕೊರತೆ, ಸರ್ಕಾರವು ಗೋಪಾಲಕರನ್ನ ನೇಮಿಸಿದರೆ ಸೂಕ್ತವಾಗಿದೆ ಎಂದರು.
ಡಾಕ್ಟರ್ ವೈ ವಿ ಕೃಷ್ಣಮೂರ್ತಿ ಮಾತನಾಡಿ ರಾಸುಗಳಿಗೆ ಬೆಟ್ಟದ ಪ್ರದೇಶವನ್ನು ಸರ್ಕಾರ ನಮಗೆ ನೀಡಲು ಕೋರಲಾಗಿದೆ ಸಗಣಿ, ಮೂತ್ರ ಮತ್ತು ಹಾಲು ಮೂರರಿಂದ ಸ್ವರ್ಗ ಸಾರ ಎಂಬುದನ್ನು ತಯಾರು – ಮಾಡಲಾಗುತ್ತಿದೆ, ಗೋವುಗಳ ಸಗಣಿಯನ್ನು ಖರಿದಿಸಿ ಅವುಗಳಿಂದ ಉತ್ಪನ್ನ ಮಾಡಲಾಗುವುದು,ಮುಂಬೈ ಮೂಲದ ದಿನೇಶ್ ಶಾಹ್ರ ಫೌಂಡೇಷನ್. ಮುಂಬಯಿ ,ಕಾಮದುಘಾ ಟ್ರಸ್ಟ್ ರಿ,ಗೋಫಲ ಟ್ರಸ್ಟ್ ಶ್ರೀರಾಮಚಂದ್ರಪುರ ಮಠ ದ ಸಹಯೋಗದಲ್ಲಿ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಗೋಫಲ ಟ್ರಸ್ಟಿನ ಮುಖ್ಯ ಕಾರ್ಯನಿರ್ವಣ ಅಧಿಕಾರಿ ಬಾಲ ಸುಬ್ರಮಣ್ಯ ಭಟ್ , ಕಾಮದುಘಾ ಟ್ರಸ್ಟ್ ಅಧ್ಯಕ್ಷರಾದ ವೈ ವಿ ಕೃಷ್ಣಮೂರ್ತಿ. ಡಾ ಪ್ರಕಾಶ್ , ಡಾ ರಾಜಶೇಖರ್. ಮುತ್ತಯ್ಯ , ವ್ಯವಸ್ಥಾಪಕರಾದ ಕುಮಾರ್ ,ಸುತ್ತಮುತ್ತಲಿನ ಗ್ರಾಮದ ರೈತರು ಹಾಜರಿದ್ದರು . ಇದೇ ಸಮಯದಲ್ಲಿ ಭಾಗವಹಿಸಿದ ಎಲ್ಲಾ ರೈತರಿಗೂ ಒಂದು ಪ್ಲಾಸ್ಟಿಕ್ ಬಕೆಟ್ ಹಾಗೂ ಖನಿಜಾಂಶದ ಪೊಟ್ಟಣವನ್ನು ವಿತರಿಸಲಾಯಿತು.