ಶ್ರೀ ಮಹದೇಶ್ವರನ ಸನ್ನಿಧಿಯಲ್ಲಿ ಗಡಿ ನಾಡ ಉತ್ಸವ
ಹನೂರು : ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮವು ಮಲೈ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವುದು ಸಂತೋಷಕರ ವಿಷಯವಾಗಿದೆ , ಇದರಿಂದ ರಾಜ್ಯದ ಎಲ್ಲಾ ನೌಕರರಿಗೂ ನಮ್ಮ ಭಾಗದ ಆರಾಧ್ಯದೈವ ಮಾದ್ಪನ ದರ್ಶನವಾಗಿದೆ, ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ ಆರ್ ಮಂಜುನಾಥ್ ತಿಳಿಸಿದರು .
ನಮ್ಮ ಭಾಗದ ಶಿಕ್ಷಕರ ತಂಡವು ನನ್ನನು ಭೇಟಿ ಮಾಡಿ ಎಲ್ಲಾ ನೌಕರರ ಬೇಡಿಕೆಯ ಬಗ್ಗೆ ಮನವಿ ಮಾಡಿದ್ದಾರೆ ನಿಮ್ಮ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಮುಂದಿನ ದಿನಗಳಲ್ಲಿ ನಾನು ಸನ್ಮಾನ್ಯ ಮುಖ್ಯಮಂತ್ರಿಯವರಿ ಮನವರಿಕೆ ಮಾಡಿದ್ದೇನೆ. ಹನೂರು ಕ್ಷೇತ್ರವು ಭೌಗೋಳಿಕವಾಗಿ ದೊಡ್ಡ ಕ್ಷೇತ್ರವಾಗಿದೆ ಹಾಗಾಗಿ ಅಭಿವೃದ್ಧಿ ಪಡಿಸುವುದು ಸವಾಲಿನ ಕೆಲಸವು ನನ್ನ ಮುಂದಿದೆ ,ಕ್ಷೇತ್ರಕ್ಕೆ ನಾನು ನನ್ನ ಕೈಲಾದ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ಹೀಗಾಗಲೇ ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಜೀವನದ ಪ್ರಮುಖ ಘಟ್ಟವಾಗಿದೆ .ಆದ್ದರಿಂದ ಶಾಲಾ ಮಕ್ಕಳಿಗೆ ಭರವಸೆ ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಶಸ್ವಿಯಾಗಿದ್ದೇವೆ . ಯಾವುದೇ ಸೇವೆ ಮಾಡಲು ಅಧಿಕಾರಿಗಳ ಬೆಂಬಲವು ದೊರೆಯಬೇಕು ಎಲ್ಲಾರ ಚಿತ್ತವು ಅಭಿವೃದ್ಧಿಯತ್ತ ಇರಲಿ ಎಂದು ತಿಳಿಸಿದರು.
ರಾಜ್ಯ ಅಧ್ಯಕ್ಷರಾದ ಷಡಕ್ಷರಿ ರವರು ಮಾತನಾಡಿದ ಅವರು ಈ ಕ್ಷೇತ್ರದಿಂದ ಪ್ರಮುಖ ನಿರ್ಣಾಯವನ್ನು ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು. ಇಂದಿಗೂ ಇಂಡಿಗನತ್ತದ ಅರವತ್ತು ಮಕ್ಕಳು ದತ್ತು ತೆಗೆದುಕೊಂಡಿದ್ದು ಶಾಲೆಗೆ ಪೀಠೋಪಕರಣಗಳನ್ನು ನೀಡಿದರು.ಶಿಕ್ಷಕರಾದ ರಾಘವೆಂದ್ರ ಅವರ ಶ್ರಮಬಹಳಷ್ಟಿದೆ, ಕಳೆದ ಬಾರಿ ಮಂಡ್ಯದಲ್ಲಿ ನಡೆದ ಸಮಿತಿಯ ಶಿಪಾರಸುಗಳಿಗೆ ಒಪ್ಪಿಗೆ ನೀಡಲಾಯಿತು. ಸರ್ಕಾರಿ ನೌಕರರು ಗಡಿನಾಡ ಉತ್ಸವ ಮಾಡಿರುವುದು ಮೊಟ್ಟಮೊದಲಾಗಿದೆ.ಬೆಂಗಳೂರಿನ ಮೇಕ್ರಿ ವೃತ್ತದ ಸಮೀಪವಿರುವ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡಲಾಗುವುದು .ರಾಜ್ಯದ ಎಲ್ಲಾ ಸಂಘದ ನೌಕರರು ಭಾಗವಹಿಸಬೇಕಾಗಿದೆ. ಸಮ್ಮೇಳನದ ಕಾರ್ಯಗಾರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ದೀಕ್ಷೀತ್ ರವರು ಪ್ರಜಾಸ್ನೇಹಿ ಆಡಳಿತದಬಗ್ಗೆ ಪ್ರೇರಣ ನುಡಿಗಳನ್ನಾಡಲಿದ್ದಾರೆ . ಹಾಗೂ ಖ್ಯಾತ ಹೃದ್ರೋಗ ತಜ್ಞರಾದ ಪದ್ಮಶ್ರೀ ಡಾ ಸಿ ಎನ್ ಮಂಜುನಾಥ್ ಸರ್ಕಾರಿ ನೌಕರರ ಆರೋಗ್ಯ ಮತ್ತು ಒತ್ತಡದ ಬದುಕಿನ ಬಗ್ಗೆ ಉಪನ್ಯಾಸ ಮಾಡುವರು . ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಾಧಿಯಾಗಿ ಉಪಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರೆಲ್ಲ ಭಾಗವಹಿಸುವರು.ಎಲ್ಲಾ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುವಂತೆ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಅಧಿಕಾರಿಗಳು ಹಲವಾರು ಸಂಘದಿಂದ ಪದಾಧಿಕಾರಿಗಳು ಆಗಮಿಸುತ್ತಾರೆ. ಇದೇ ತಿಂಗಳ ಹದಿನೈದನೇ ತಾರೀಖಿನೊಳಗೆ ಎಲ್ಲಾರಿಗೂ ಸಭೆಯನ್ನು ಕರೆಯಬೇಕು ಎಂದು ತಿಳಿಸಿದರು. ದಿನಪೂರ್ತಿ ಕವಿಗೋಷ್ಟಿ ,ಕಲಾತಂಡಗಳ ಮೆರವಣಿಗೆ ಹಾಗೂ ಸರಿಗಮಪ ತಂಡದಿಂದ ಉತ್ತಮ ಕಾರ್ಯಕ್ರಮ ನೀಡಲಾಗುವುದು ಎಲ್ಲಾ ನೌಕರರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳು ಮತ್ತು ಚಾಮರಾಜನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಕಾರ್ಯದರ್ಶಿಗಳಾದ ವೆಂಕಟೇಶ್ , ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷರಾದ ಗುರುಸ್ವಾಮಿ , ಮತ್ತು ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಅನೇಕ ಸರ್ಕಾರಿ ನೌಕರರು ಉಪಸ್ಥಿತರಿದ್ದರು.
ವರದಿ: ಚೇತನ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.