ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪ್ರಚಲಿತ ಕಾಲಘಟ್ಟದಲ್ಲಿ ದೇಶದ
ಅಭಿವೃದ್ಧಿಗೆ, ರಾಷ್ಟ್ರೀಯತೆ, ಪ್ರಗತಿಪರ ಚಿಂತನೆ, ವೈಜ್ಞಾನಿಕತೆ ಆಧಾರದ ಶಿಕ್ಷಣ ವ್ಯವಸ್ಥೆ ಇರಬೇಕಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿದ್ಯಾ ಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಸಂಕುಲಗಳ ಶಾಲೆಗಳ 2025-26ನೇ ಸಾಲಿನ ಶೈಕ್ಷಣಿಕ ಸಹಮಿಲನದ ಸಮಾಪನಾ ಸಮಾರಂಭದಲ್ಲಿ ಮಾತನಾಡುತ್ತಾ ಭಾರತೀಯ ಜ್ಞಾನ ಪರಂಪರೆಯು ವಿಸ್ತಾರ ವ್ಯಾಪ್ತಿಹೊಂದಿದೆ. ರಾಷ್ಟ್ರದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡೆ
ಹೊಸ ಶಿಕ್ಷಣ ನೀತಿ ತರಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಮಿಶ್ರಿತವಾಗಿರಬಾರದು. ಪ್ರಚಲಿತ ವಿದ್ಯಮಾನಗಳಲ್ಲಿ ಹೊಸ ಶಿಕ್ಷಣ ನೀತಿಯ ಮೂಲಕ ಅಂಶಗಳನ್ನು ಮುಂದುವರೆಸುವುದು ಸೂಕ್ತ ಎಂದು ಹೇಳಿದರು.
ವಿದ್ಯಾ ಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ಸಂಯೋಜಕ ಚಂದ್ರಶೇಖರ ಕವಟಗಿ, ವಿದ್ಯಾ ಭಾರತಿ ಜಿಲ್ಲಾ ಅಧ್ಯಕ್ಷ ಪ್ರಭು ಎಸ್.ಕಡಿ, ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುದ್ದೇಬಿಹಾಳ ತಾಲೂಕಿನಲ್ಲಿಯೇ ಪ್ರಪ್ರಥಮವಾಗಿ ಸಿ.ಎ ಪರೀಕ್ಷೆಯನ್ನು ಉತ್ತೀರ್ಣಗೊಂಡ ತರುಣ ಜೈನಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜ್ಞಾನ ಭಾರತಿ ವಿದ್ಯಾ ಮಂದಿರ ಸಂಸ್ಥೆಯ ಅಧ್ಯಕ್ಷರಾದ ಬಿ.ಪಿ.ಕುಲಕರ್ಣಿ ಕೋಶಾಧ್ಯಕ್ಷರಾದ ಮಾಣಿಕಚಂದ ಡಂಡಾವತಿ, ನಿರ್ದೇಶಕರುಗಳಾದ ಡಾ. ಪರಶುರಾಮ ಪವಾರ, ಸೋಮನಗೌಡ ಸಾಲವಡಗಿ, ಆರ್.ಎಸ್.ಎಸ್ ವಿಜಯಪುರ ವಿಭಾಗ ಸಂಘಚಾಲಕರಾದ ಚಿದಂಬರ ಕರಮರಕರ, ವಿದ್ಯಾ ಭಾರತಿ ವಿಭಾಗ ಪ್ರಮುಖ ರಾಜಶೇಖರ ಉಮರಾಣಿ, ಸಂಯೋಜಕರಾದ ಚಂದ್ರಶೇಖರ ಕವಟಗಿ, ಕಾರ್ಯದರ್ಶಿ ರಾಜಶೇಖರ ಪಾಟೀಲ್, ಸಹಕಾರ್ಯದರ್ಶಿ ಶಿವನಗೌಡ ಪಾಟೀಲ್, ಪ್ರಚಾರ ವಿಭಾಗದ ಸಂಚಾಲಕರಾದ ರಾಮಚಂದ್ರ ಹೆಗಡೆ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯಾ ಭಾರತಿ ಸಂಘಟನೆಗೆ ಒಳಪಟ್ಟ ಸುಮಾರು 27 ಶಾಲೆಗಳಿಂದ ಆಡಳಿತ ವರ್ಗ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರೆಲ್ಲರೂ 316 ಸಂಖ್ಯೆಯಲ್ಲಿ ಜನರು ಸೇರಿದ್ದರು.