ಅಫಜಲಪುರ : ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರಧ್ವಜ ವಿತರಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭು ಪುಲಾರಿ.
ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ರೂಪಿಸಿದ್ದು, ಅದರ ಸಫಲತೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಷ್ಟ್ರ ಧ್ವಜಗಳನ್ನು ವಿತರಿಸುತ್ತಿದ್ದೇವೆ ಎಂದು ಕಸಾಪ ಅಧ್ಯಕ್ಷ ಪ್ರಭು ಫುಲಾರಿ ತಿಳಿಸಿದರು.
ಅವರು ಪಟ್ಟಣದ ಕನ್ನಡ ಭವನದಲ್ಲಿ ರಾಷ್ಟ್ರಧ್ವಜಗಳನ್ನು ವಿತರಿಸಿ ಮಾತನಾಡಿದ ಅವರು ನಮ್ಮ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಹೋರಾಟ ಮಾಡಿದವರ, ತ್ಯಾಗ ಬಲಿದಾನ ಬಗ್ಗೆ ಮನೆ ಮನೆಗೆ ತಿಳಿಸಲು ಇದು ಸುಸಮಯವಾಗಿದೆ. ಇಂತಹ ಅವಕಾಶವನ್ನು ನಾವು ಕಳೆದುಕೊಳ್ಳದೆ ನಮಗಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ ಎಂದರು. ಗೌರವ ಅಧ್ಯಕ್ಷ ಬಸಣ್ಣ ಗುಣಾರಿ, ಅಶೋಕ ಬಗಲಿ, ಚಂದು ಕರ್ಜಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಡಾ. ಸಂಗಣ್ಣ ಸಿಂಗೆ, ಪರಮಾನಂದ ಸರಸಂಬಿ, ಚಂದ್ರಶೇಖರ ಕರ್ಜಗಿ, ಚಂದು ಬನ್ನಟ್ಟಿ, ಮಳೇಂದ್ರ ಸುತಾರ, ರವಿಚಂದ್ರ ಅತನೂರ, ಸಂಗಮನಾಥ ಸಾಳಾಪುರ, ಬಾಹುಬಲಿ ಮಾಲಗತ್ತಿ, ಸದಾಶಿವ ಮೇತ್ರೆ, ಚಂದ್ರಕಾಂತ ಮ್ಯಾಳೇಶಿ, ಕೃಷ್ಣಾ ಸಿಂಧೆ, ವಿಶ್ವನಾಥ ಹೇರೂರ, ಈರಣ್ಣ ಮಗಿ, ಚಿನ್ನು ಮನಿಯಾರ, ರೂಪಾ ಸಾಲೂಟಗಿ, ಹಿರೋಜರಾಯ ಪಾಟೀಲ್, ಜಗನ್ನಾಥ ಮೋರೆ, ಬಸಪ್ಪ ಜಾಬಾ, ಶಿವಪ್ಪ ನಾಯಕ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತಿರು.
ವರದಿ : ಉಮೇಶ್ ಅಚಲೇರಿ, ಅಫಜಲಪುರ/ಕಲ್ಬುರ್ಗಿ..