ಹಿಂದು-ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ.
ಶ್ರದ್ಧಾಭಕ್ತಿಯ ಹಬ್ಬ ಆಚರಣೆ | ಪ್ರಮುಖ ರಸ್ತೆಗಳಲ್ಲಿ ಅಲಾಯಿ ದೇವರು, ಡೋಲಿಗಳ ದೇವರು ಅದ್ದೂರಿ ಮೆರವಣಿಗೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕೊನೆಯ ದಿನವಾದ ಸೋಮವಾರ ಸಂಜೆ ಅಲಾಯಿ ದೇವರ ಹಾಗೂ ಡೋಲಿಗಳ ವಿಸರ್ಜನೆ ಅಂಗವಾಗಿ ಜರುಗಿದ ಮೆರವಣಿಗೆಯಲ್ಲಿ ಜನರು ಶ್ರದ್ಧಾ, ಭಕ್ತಿಯಿಂದ ಭಾಗವಹಿಸಿದರು.
ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಡೋಲಿ ದೇವರು ಸೋಮವಾರ ಸಂಜೆ ಜರುಗಿದ ವಿಸರ್ಜನಾಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು. ಡೋಲಿ, ಅಲಾಯಿ ದೇವರು ಸಾಗುವ ಅಗಿಸಿ ಮುಂದೆ ಜಮಾಯಿಸಿದ್ದ ಜನರು,ನಾಗರಿಕ ಮಹಿಳೆಯರು ಮಕ್ಕಳು ಯುವಕರು ಉತ್ತತ್ತಿ,ಚುರಮುರಿ ಅಲಾಯಿ ದೇವರಿಗೆ ತುರುವ ಮೂಲಕ ದರ್ಶನ ಪಡೆದರು.
ಅಲಾಯಿ ದೇವರನ್ನು ಹಿಡಿಯುವರಾದ ಕಾಶಪ್ಪ ಈಳಗೇರ,ಲಕ್ಷ್ಮಣ ಈಳಗೇರ,ಮುದಕಪ್ಪ ಈಳಗೇರ, ಅಲಾಯಿ ದೇವರು ಪೂಜಾರಿ, ದೌಲಾಸಾಬ ಮುಜವಾರ, ಹಲಳ್ಳಿ ಬುಕ್ ನಾಯ್ಕೋಡಿ,
ಪ್ರತಿಷ್ಠಾಪಿಸಿದ್ದ ಅಲಾಯಿ ಹಾಗೂ ಡೋಲಿ ದೇವರಗಳು ಹಲಗಿ ಭವ್ಯ ಮೆರವಣಿಗೆ ಮೂಲಕ ಗ್ರಾಮದ ಶ್ರೀ ಯಮನೂಪ್ಪ ಗುಡಿಯಿಂದ ಶ್ರೀ ಗದ್ದೆಮ್ಮ ದೇವಿ,ಹಾಗೂ ಆಂಜನೇಯ ದೇವಸ್ಥಾನ ದೇವರು ಆರ್ಶಿವಾಗಳನ್ನು ಪಡೆದು ಸಮಾಗಮಗೊಂಡವು. ನಂತರ ಊರ ಬಾವಿಯಲ್ಲಿ ವಿಸರ್ಜನಾ ಕಾರ್ಯ ನಡೆಯಿತು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಹಿಂದು-ಮುಸ್ಲಿಂ ಬಾಂಧವರು,ಚವನಭಾವಿ ಗ್ರಾಮದ ಸಮಸ್ತ ದೈವ ಮಂಡಳಿ, ಮಹಿಳೆಯರು ನಾಗರಿಕರು ಯುವಕರು ಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.