ಅಫಜಲಪುರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಮಣ್ಣೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಆರತಿ ಬಸವರಾಜ ಜನ್ನಾ ಹೇಳಿದರು. ಅವರು ತಾಲೂಕಿನ ಮಣ್ಣೂರ ಗ್ರಾಮ ಪಂಚಾಯತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖಂಡರಾದ ಅಪ್ಪಾಸಾಬ ಹೊಸೂರಕರ ಮಾತನಾಡಿ
ಪರಿಸರವನ್ನು ಉಳಿಸಿ ಬೆಳೆಸುವ ಹೊಣೆ ಜವಾಬ್ದಾರಿ
ಪ್ರತಿಯೊಬ್ಬರ ಮೇಲಿದೆ. ಪರಿಸರ ನಾಶ ಮಾಡದೆ ಮುಂದಿನ ಸಂತತಿಗೂ ಕೊಡುಗೆಯಾಗಿ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಸಂರಕ್ಷಣೆ ಬಗ್ಗೆ ಪ್ರಮಾಣ ಮಾಡುವ ಮೂಲಕ ಪ್ರತಿ ಮನೆಯಲ್ಲಿ ಗಿಡ ಮರಗಳನ್ನು ಬೆಳೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ,ಪಂ ಮಾಜಿ ಅಧ್ಯಕ್ಷ ರಮೇಶ ಧೂಳಪ್ಪ ಬಾಕೆ, ಗ್ರಾ,ಪಂ ಉಪಾಧ್ಯಕ್ಷ ಬಿ ರಾಜು ಬೆನಕನಹಳ್ಳಿ, ಕಾರ್ಯದರ್ಶಿ ನಾರಾಯಣ ಚವ್ಹಾಣ, ಸದಸ್ಯರಾದ ಬಸವರಾಜ ವಾಯಿ, ರಿಯಾಜ ಲಾಳಸಂಗಿ, ಲಾಡ್ಲೆ ಮಶಾಕ ಗೌರ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ, ಅಪ್ಪಾಸಾಬ ಹೊಸೂರಕರ, ಮಲಕಣ್ಣ ಹೊಸೂರಕರ, ವಿ ಎಸ್ ಎಸ್ ಎನ್ ಅಧ್ಯಕ್ಷ ಮಹಾಂತೇಶ ಕರೂಟಿ, ಉಪಾಧ್ಯಕ್ಷ ಚಂದು ಹಿರೇ ಕುರುಬರ, ಬಸಣ್ಣ ಜಕಾಪೂರ, ಧಾನಪ್ಪ ನಾವಾಡಿ, ಕಾಶೀನಾಥ ಯಾದವಾಡ, ಬಸವರಾಜ ಜನ್ನಾ, ಸಿದ್ರಾಮ ಚಿಕ್ಕಮಣೂರ, ಮಹಾದೇವ ಪ್ಯಾಟಿ, ಗುಳುರಾಯ ಬುರುಡ, ಕಾಶೀನಾಥ ಜೇವೂರ, ಅಂಬಣ್ಣ ವಾಯಿ, ಹಾಜಿ ಮಲಂಗ ಕರವಲ್, ಮಲ್ಲಪ್ಪ ಗೋಪಗೊಂಡ, ಹುಸೇನಬಾಷಾ ಬಡೆಘರ, ಶಾವರಸಿದ್ದ ಜಮಾದಾರ, ಮಾಳು ಸೇಜೂಳೆ, ಜಗದೀಶ ಬೇನೂರ, ಬಸವರಾಜ ಕೋಕರೆ ಸೇರಿದಂತೆ ಇತರರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.