ಇಂಡಿ : ತಹಶಿಲ್ದಾರ ಕಾರ್ಯಾಲಯದಲ್ಲಿ ಈ ತಂತ್ರಾಂಶ ಕಛೇರಿಯನ್ನು ಶಾಸಕ ಯಶವಂತರಾಯಗೌಡ ಪಾಟೀಲ್ ಉದ್ಘಾಟನೆ ಮಾಡಿದರು.
ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ತಾಲೂಕು ಆಡಳಿತ ಸೌಧದ ತಹಶಿಲ್ದಾರ ಕಛೇರಿಯಲ್ಲಿ ನೂತನ ವಾಗಿ ನಿರ್ಮಿಸಿರುವ ಈ ತಂತ್ರಾಂಶ ಕಚೇರಿಯನ್ನು ಶಾಸಕ ಯಶವಂತರಾಯಗೌಡ ಪಾಟೀಲ್ ಮಂಗಳವಾರ ಉದ್ಘಾಟನೆ ಗೊಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಕಾರ್ಯದರ್ಶಿ ವಿಜಯಕುಮಾರ್ ಆಜೂರ, ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ, ತಹಶಿಲ್ದಾರ ಬಿ.ಎಸ್ ಕಡಕಬಾವಿ, ತಾ.ಪಂ ಅಧಿಕಾರಿ ಬಾಬು ರಾಠೋಡ, ಶಿರಸ್ತೆದಾರ ಬಿ.ಎ ರಾವೂರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.