ಇಂಡಿ : ತಾಲೂಕಿನ ಹಿರೇಮಸಳಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಹಾಗೂ ಲಾಯಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಮಾಹಾಳಿಂಗರಾಯ ಮಾಹತ್ಮೆ ಅರ್ಥಾತ್ ಗುರು ಶಿಷ್ಯರ ಮಹಿಮೆ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಉದ್ಘಾಟಿಸಿದರು.
ತದನಂತರ ಮಾತಾನಾಡಿದ ಅವರು, ಮೋಬೈಲ್ ಪ್ರಪಂಚದ ಭರಾಟೆಯ ಮಧ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿಯ ನಾಶವಾಗುತ್ತಿವೆ. ಸಂಸ್ಕೃತಿಗಳ ಉಳಿವಿಗಾಗಿ ಇಂತಹ ಮಹತ್ವ ಪೂರ್ಣ ಶ್ರೀಮಾಹಾಳಿಂಗರಾಯ ಮಹಾತ್ಮ ಎಂಬ ಭಕ್ತಿ ಪೂರ್ವಕವಾದ ಪೌರಾಣಿಕ ನಾಟಕ ಪ್ರದರ್ಶನ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಲೇಂದು ಶುಭಹಾರೈಸಿದರು. ನಾಟಕಗಳು ನಶಿಸಿ ಹೋಗುತ್ತಿರುವ ಆಧುನಿಕ ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿಯ ರಕ್ಷಣೆಗೆ ಶ್ರಮಿಸಿದ್ದು ಸಂತೋಷ ವೆಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಸಾನಿಧ್ಯವನ್ನು ಶರಣಯ್ಯ ಶಾಸ್ತ್ರಿ ವಹಿಸಿದ್ದರು ಹಾಗೂ ಅತಿಥಿಯಾಗಿ ಮಹ್ಮದ್ ಗೂಗಿಹಾಳ, ಶ್ರೀ ಕೃಷ್ಣ ಸುಣಗಾರ, ರಾಜುಗೌಡ ಪಾಟೀಲ, ಜೆಟ್ಟಪ್ಪ ಉಪ್ಪಾರ, ಡಾ.ಮಲ್ಲಿಕಾರ್ಜುನ ಕಲ್ಲೂರ, ನಜೀರ್ ಗೌರ, ಅಶೋಕ್ ಹಂಜಗಿ, ಅದೃಶಪ ವಾಲಿ, ಶಿವುಕುಮಾರ ವಾಲಿಕಾರ, ಅಶೋಕ ಮರಡಿ, ಹಿರಗಪ್ಪ ನಾಯ್ಕೋಡಿ, ಶಿವಾನಂದ ಕ್ಷತ್ರಿ, ಮುಂತಾದ ನಾಯಕರು ಉಪಸ್ಥಿತರಿದ್ದರು