ರಾಯಚೂರು: ಗದ್ವಾಲ್ ರಸ್ತೆಯಿಂದ ಜಲಾಲ್ ನಗರ ಬಡಾವಣೆ ಮುಖಾಂತರ ಚಂದ್ರಬಂಡಾ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಚಾಲನೆ ನೀಡಿದರು. ಕೆಕೆಆರ್‌ಡಿಬಿ ಯೋಜನೆಯಡಿ ೩.೪೦ ಕೋಟಿ ಕಾಮಗಾರಿ ಆರಂಭಿಸಲಾಯಿತು. ಸುಂದರವಾದ ರಸ್ತೆ ನಿರ್ಮಿಸಲು ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪನಾಡಗೌಡ, ವೈ.ಗೋಪಾಲ ರೆಡ್ಡಿ, ವೀರೇಶ ಬೂತಪ್ಪ, ಲಿಂಗಾರೆಡ್ಡಿ, ರಾಘವೇಂದ್ರ, ಬಸವರಾಜ, ರಂಗಪ್ಪ ನಾಯಕ, ಕೆ.ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.