ಸಿಂಧಗಿ: ಡಬಲ್ ಮರ್ಡರ್ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಶಂಕರಗೌಡ ಬಿರಾದಾರ, ಅಪ್ಪಾಸಾಹೇಬ್ ಬಿರಾದಾರ, ಸಂಗಣ್ಣ ಬಿರಾದಾರ, ಮಂಜುನಾಥ ಬಿರಾದಾರ ಬಂಧಿತ ಆರೋಪಿಗಳು. ಇನ್ನೂ ಜೂನ್ 6 ರಂದು ಮಕ್ಕಳ ಟಿಸಿ ತರಳು ರಾಜಶ್ರಿ ಯರಗಲ್ಲ, ನಾನಾಗೌಡ ಯರಗಲ್ಲ ಹೋದಾಗ ಶಂಕರಗೌಡ ಹಾಗೂ ಸಹಚರರು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಇನ್ನು ಖಡಕ್ ಸಿಂದಗಿ ಪಿಎಸ್ಐ ನಿಂಗಪ್ಪ ಪೂಜಾರಿ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ಲಾಕ್ ಮಾಡಿದ್ದಾರೆ. ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.