ಚೆಂಗಡಿ ಗ್ರಾಮಕ್ಕೆ ಡಿಸಿ ಬೇಟಿ ; ಗ್ರಾಮದಲ್ಲಿ ಸಮಸ್ಯೆಗಳ ಸುರಿಮಳೆ..!
ಹನೂರು : ಕಾಡಾನೆಗಳ ಉಪಟಳದಿಂದ ಬೆಷತ್ತಿರುವ ನಮಗೆ ಚೆಂಗಡಿ ಗ್ರಾಮದಿಂದ ಬಿಡುಗಡೆಗೊಳಿಸಿ ಎಂದು ಮಹಿಳೆಯರು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ರವರಿಗೆ ಮನವಿ ಮಾಡಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ವನ್ಯಧಾಮ ಅರಣ್ಯ ಪ್ರದೇಶದ ನಡು ಮಧ್ಯದಲ್ಲಿರುವ ಚೆಂಗಡಿ ಗ್ರಾಮಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಬೇಟಿ ಸಂದರ್ಭದಲ್ಲಿ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನೇ ಜಿಲ್ಲಾಧಿಕಾರಿಗೆ ತೆರೆದಿಟ್ಟಿದ್ದಾರೆ.
ಕಾಡುಪ್ರಾಣಿಗಳು ಹಾಗೂ ಕಾಡಾನೆಗಳು ಮನೆಯ ಬಳಿ ಬರುತ್ತವೆ : ಚೆಂಗಡಿ ಗ್ರಾಮದ ನಾಗರಿಕರು ಮತ್ತು ಮಹಿಳೆಯರು ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ದಲ್ಲಿ ಕಾಡುಪ್ರಾಣಿಗಳು ಮತ್ತು ಆನೆಗಳು ಸಹ ಮನೆಯ ಬಳಿಯ ಬರುತ್ತವೆ ನಮ್ಮನ್ನು ಗ್ರಾಮದಿಂದ ಬಿಡುಗಡೆಗೊಳಿಸಿ ಹಲವಾರು ವರ್ಷಗಳ ಬೇಡಿಕೆಯನ್ನು ಈಡೇರಿಸುವಂತೆ ಗ್ರಾಮದ ಮಹಿಳೆಯರು ಮತ್ತು ಹಿರಿಯ ನಾಗರಿಕರು ಸಹ ಜಿಲ್ಲಾಧಿಕಾರಿಗಳಿಗೆ ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟ ಗ್ರಾಮಸ್ಥರು.
ಬದುಕಬೇಕೆಂಬ ಆಸೆ ಆದರೆ ಜೀವ ಭಯ: ದಿನನಿತ್ಯ ಚಂಗಡಿ ಗ್ರಾಮದಲ್ಲಿ ಇರುವ ಗ್ರಾಮಸ್ಥರು ಮತ್ತು ನಾಗರಿಕರು ಮಹಿಳೆಯರು ಹಗಲು ರಾತ್ರಿ ಎನ್ನದೆ ಗ್ರಾಮಕ್ಕೆ ಬರುತ್ತಿರುವ ಕಾಡುಪ್ರಾಣಿಗಳು ಮತ್ತು ಆನೆಗಳ ಉಪಟಳದಿಂದ ಬೇಸತ್ತಿದ್ದೇವೆ ಗ್ರಾಮದಿಂದ ನಮ್ಮನ್ನು ಬಿಡುಗಡೆಗೊಳಿಸಿ ಈ ಹಿಂದೆ ಜನಪ್ರತಿನಿಧಿಗಳು ಅಧಿಕಾರಿಗಳು ಗ್ರಾಮವನ್ನು ಬೆರಡೆ ಸ್ಥಳಾಂತರಿಸುವುದಕ್ಕೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಸಹ ಅಧಿಕಾರಿಗಳ ಮುಂದೆ ಗ್ರಾಮದಲ್ಲಿ ನಿರಂತರವಾಗಿ ಪ್ರಾಣಿ ಮನುಷ್ಯ ದಿನನಿತ್ಯ ಸಂಘರ್ಷ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ನಿರಂತರವಾಗಿ ಕಾಡಾನೆಗಳ ಅವಳಿಯಿಂದ ಸಮಸ್ಯೆಯಿಂದ ಬೇಸತ್ತಿದ್ದೇವೆ ಈ ಹಿಂದೆ ಹಲವಾರು ಜನ ಗ್ರಾಮದ ನಾಗರಿಕರು ಕಾಡಾನೆ ದಾಳಿಯಿಂದ ಗಾಯಗೊಂಡವರು ಇದ್ದಾರೆ ಮೃತಪಟ್ಟವರು ಸಹ ಗ್ರಾಮದವರಾಗಿದ್ದಾರೆ ಆದುದರಿಂದ ಕೂಡಲೇ ಚಂಗಡಿ ಗ್ರಾಮವನ್ನು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ಸ್ಥಳಾಂತರ ಮಾಡಬೇಕಾಗಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಡಿ ಸಿ ಎಫ್ ಸಂತೋಷ್ ಕುಮಾರ್ ಒಲೆಯ ರಮ್ಯಾ ಅಧಿಕಾರಿ ಸಿಬ್ಬಂದಿ ವರ್ಗ ಗ್ರಾಮಸ್ಥರು ಉಪಸಿತರಿದ್ದರು.
ಆಶ್ರಮ ಶಾಲೆಗೆ ಭೇಟಿ : ತಾಲೂಕಿನ ಕೊಣನಕೆರೆ ಗ್ರಾಮದಲ್ಲಿರುವ ಬುಡಕಟ್ಟು ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತನಾಡಿ ಶಾಲೆಯಲ್ಲಿ ಪಾಠ ಪ್ರವಚನ ಮತ್ತು ಇಲ್ಲಿನ ಆಶ್ರಮ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳು ಸಹ ಪರಿಶೀಲನೆ ನಡೆಸಿ ಶಿಕ್ಷಕರಿಂದ ಮಾಹಿತಿ ಪಡೆದು ಆಶ್ರಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡುವ ಮೂಲಕ ಶಾಲೆಗೆ ಮತ್ತು ಗ್ರಾಮಕ್ಕೆ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು ಚಾಮರಾಜನಗರ ಜಿಲ್ಲೆ.