ವಿಜಯಪುರ : ಆಯುಷ್ಮಾನ್ ಭಾರತ ಕರ್ನಾಟಕ ಕಾರ್ಡ್ ಯೋಜನೆಯಡಿ ಸಾರ್ವಜನಿಕರಿಗೆ ಕಾರ್ಡ್ಗಳ ವಿತರಣೆ ಕುಂಠಿತವಾಗಿದೆ. ಕಾರ್ಡ್ಗಳ ವಿತರಣಾ ವೇಗವನ್ನು ಹೆಚ್ಚಿಸಿ ಪುನರ್ ತಲುಪುವ ಕುರಿತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸೂಚನೆಯನ್ನು ಹೊರಡಿಸಿದೆ.
ಈ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಪಡಿತರ ವಿತರಣೆ ಮಾಡುವ ಅಂಗಡಿ ಮಾಲೀಕರು APL ಮತ್ತು BPL ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಪಡಿತರ ವಿತರಿಸುವ ಎರಡು ದಿನಗಳ ಮುಂಚಿತವಾಗಿ ವಿಸ್ತರಿಸಲು ಸೂಚಿಸಿದೆ.
ಅಲ್ಲದೆ ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ಗ್ರಾಮದಲ್ಲಿರುವ ಗ್ರಾಮ-ಒನ್ ಕೇಂದ್ರದ ಸಿಬ್ಬಂದಿಯವರನ್ನು ಸಂಪರ್ಕಿಸಿ ಮತ್ತು ನಗರ ಪ್ರದೇಶದಲ್ಲಿ ಜಿಲ್ಲಾ ವ್ಯವಸ್ಥಾಪಕರಾದ ಪ್ರವೀಣ್ (9980089827) ಸಂಪರ್ಕಿಸಲು ಕೋರಲಾಗಿದೆ.
ಇನ್ನು ಆರೋಗ್ಯ, ಶಿಕ್ಷಣ ಡಿ.ಡಿ.ಪಿ.ಯು, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಗ್ರಾ.ಪಂ. ಮಟ್ಟದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಕಡ್ಡಾಯವಾಗಿ Ab-Ark ಕಾರ್ಡ್ಗಳನ್ನು ವಿತರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.