ರಾಯಚೂರು : ಜಿಲ್ಲಾಡಳಿತ, ಜಿ.ಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೇಕಾರರ ಸಂಘದ ಸಹಯೋಗದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮ ಯ್ಯ ಜಯಂತಿ ಆಚರಿಸಲಾಯಿತು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ದುರ್ಗೇಶ ಉದ್ಘಾಟಿಸಿ ದರು. ಸರ್ವ ಸಮುದಾಯಕ್ಕೆ ತಮ್ಮ ವಚನಗಳ ಮೂಲಕ ಸರ್ವರ ಒಳಿತು ಬಯಸಿದವರೆಂದರು. ಅಂತವರನ್ನು ಒಂದೇ ಸಮುದಾಯಕ್ಕೆ ಸೀಮಿತ ಗೊಳಿಸಬಾರದು ಎಂದರು. ಉಪನ್ಯಾಸಕ ರಮೇಶ ಬಾಬು ಯಾಳಗಿ ವಿಶೇಷ ಉಪನ್ಯಾಸ ನೀಡಿ ದಾಸಿಮಯ್ಯ ಅವರು ಮನುಕುಲದ ಮಾರ್ಗದರ್ಶಕರಾಗಿದ್ದಾರೆ. ಅವರ ವಚನಗಳಲ್ಲಿ ಕಾಯಕದ ಮಹತ್ವ, ನಿಸ್ವಾರ್ಥದಿಂದ ಬದುಕುವುದ ಕಲಿಸಿದವರು ಶರಣರು. ಸ್ವಾರ್ಥಕ್ಕೆ, ದಣಿವರಿಯದೆ ಬದುಕಿದವರ ಜಯಂತಿ ಇಂದಿಗೂ ಪ್ರಸ್ತುತ ಎಂದರು.
ವೇದಿಕೆಯಲ್ಲಿ ಆರ್ ಡಿಎ ಅಧ್ಯಕ್ಷ ತಿಮ್ಮಪ್ಪನಾಡಗೌಡ, ಜಿ.ಪಂ ಸಿಇಓ ಶಶಿಕಾಂತ ಶಿವಪುರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿಡಿ ಮಂಗಲಾ ನಾಯಕ, ನೇಕಾರರ ಸಮಾಜದ ಜಿ.ನಾಗರಾಜ, ಈರಣ್ಣ ಕರ್ಲಿ, ಎಚ್.ವೆಂಕಟೇಶ, ಗೋವಿಂದರಾಜು, ಪೌರಾಯುಕ್ತ ಕೆ.ಮುನಿಸ್ವಾಮಿ ಸೇರಿ ಹಲವರಿದ್ದರು.