ರಾಯಚೂರು: ಜಿಲ್ಲೆಯಲ್ಲಿ ಪಿ.ಎಂ.ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ತುಂಗಭದ್ರ ಆಣೆಕಟ್ಟಿಗೆ ನವಲಿ ಬಳಿ ಸಮಾನಂತರ ಅಣೆಕಟ್ಟು ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲಿ ಪ್ರಾರಂಭ ಮಾಡುಬೇಕೆಂದು ಜವಳಿ ಹಾಗೂ ಸಕ್ಕರೆ ಸಚವ ಮುನೇನಕೊಪ್ಪ ಅವರಿಗೆ ಭಾರತೀಯ ಕಿಸಾನ ಸಂಘದ ಪದಾಧಿಕಾರಿಗಳು ಮನವಿ ಸಲಿಸಿದರು.
ಇನ್ನು ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿಯನ್ನು ವಿತರಿಸಬೇಕು. ಭೂ ಸ್ವಾಧೀನಗೊಂಡ ರೈತರಿಗೆ ಶೀಘ್ರ ಪರಿಹಾರ ನೀಡಲು, ಹಾಗೂ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಹತ್ತಿ ಬೆಳೆ ಬೆಳೆಯುತ್ತಿದ್ದು, ಜಿಲ್ಲೆಯ ಒಟ್ಟು ಕೃಷಿಯಲ್ಲಿ ಶೇ.43%
ರಷ್ಟು ಹತ್ತಿ ವ್ಯವಸಹಾಯ ಮಾಡುತ್ತಿದ್ದಾರೆ. ಇಲ್ಲಿನ ಹತ್ತಿ ಬೆಳೆಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದು, ಭಾರತದ
ದೇಶದ ಅತಿ ದೊಡ್ಡ ಹತ್ತಿ ಮಾರುಕಟ್ಟೆಗಳಲ್ಲಿ ರಾಯಚೂರು ಜಿಲ್ಲೆ ಕೂಡಾ ಹೆಸರು ಪಡೆದಿದೆ. ಜಿಲ್ಲೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಅಧಿಕ ಹತ್ತಿ ಜಿನ್ನಿಂಗ್ ಗಳು ಇದ್ದು, ರಾಯಚೂರು ಜಿಲ್ಲೆಯಲ್ಲಿ ಪಿ.ಎಂ.ಮಿತ್ರ ಮೆಗಾ ಟೆಕ್ಸಟೈಲ್ ಪಾರ್ಕ ಸ್ಥಾಪನೆಗಾಗಿ ಬೇಕಾಗಿರುವ 1 ಸಾವಿರ ಎಕರೆ ಜಮೀನು, 33/132 ಕೆ.ವಿ.ಸಾಮಾರ್ಥ್ಯದ ನಿರಂತರ ವಿದ್ಯುತ್ ಸಂಪರ್ಕ ಸರಬರಾಜು ವ್ಯವಸ್ಥೆ, ತುಂಗಾ ಭದ್ರ, ಕೃಷ್ಣಾ ನದಿಗಳಿಂದ ನೀರಿನ ಸರಬರಾಜು, ದೇಶದ ಎಲ್ಲಾ ಭಾಗಗಳಿಗೆ ರೈಲ್ವೆ ಸಂಪರ್ಕ, ಇದ್ದು, ಪಿ.ಎಂ.ಮಿತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ ನಿರ್ಮಿಸಲು ಉತ್ತಮ ಸೌಲಭ್ಯಗಳು ಜಿಲ್ಲೆಯಲ್ಲಿದೆ. ತಾವುಗಳು ಕೂಡಲೇ ಕೇಂದ್ರ ಸರ್ಕಾರಕ್ಕೆ ರಾಯಚೂರು ಜಿಲ್ಲೆಯಲ್ಲಿಯೇ ಮೆಗಾ ಟೆಕ್ಸಟೈಲ್ ಪಾರ್ಕ ನಿರ್ಮಿಸಲು
ರಾಜ್ಯ ಸರ್ಕಾರದಿಂದ ಶಿಫಾರಸ್ಸು ಕಳುಹಿಸಬೇಕೆಂದು ಭಾರತೀಯ ಕಿಸಾನ್ ಸಂಘ ರಾಯಚೂರು ಜಿಲ್ಲಾ ಸಮಿತಿಯಿಂದ ಸಚಿವರಿಗೆ
ತಿಳಿಸಿದರು. ಮೆಗಾ ಟೆಕ್ಸ್ ಟೈಲ್ ಪಾರ್ಕ ನಿರ್ಮಾಣದಿಂದ ರಾಯಚೂರು ಜಿಲ್ಲೆಯ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
ಆಂದ್ರ ಪ್ರದೇಶ, ತೆಲಾಂಗಣಾ, ಸರ್ಕಾರದ ಜೋತೆಗೆ ಶೀಘ್ರವಾಗಿ ಚರ್ಚೆ ನಡೆಸಿ ಆಣೆಕಟ್ಟು ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭ ಮಾಡಿ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಕಳೆದ 20-30ವರ್ಷಗಳಿಂದ ಕೃಷಿ ಮಾಡುತ್ತಿದ್ದರೂ ಕೂಡಾ
ಇದುವರೆಗೂ ಯಾವುದೇ ರೀತಿಯ ಸಾಗುವಳಿ
ಚೀಟಿ, ಸ್ವಾದೀನ ಚೀಟಿಯಾಗಲಿ, ಕೊಟ್ಟಿರುವುದಿಲ್ಲ.
ತಾವುಗಳು ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರವಾಗಿ ಸಾಗುವಳಿ ಚೀಟಿಯನ್ನು ಕೊಡಬೇಕೆಂದು
ಜಿಲ್ಲಾಡಳಿತಕ್ಕೆ ಆದೇಶ ನೀಡಬೇಕು. ಜಿಲ್ಲೆಯಲ್ಲಿ ರಸ್ತೆ, ರೈಲ್ವೆ ಯೋಜನೆ, ಕೈಗಾರಿಕೆಗಳಿಗೆ, ಹಾಗೂ ಇತರೆ ಸರಕಾರಿ ಯೋಜನೆಗಳಿಗೆ ರೈತರ ಜಮೀನು ಭೂ ಸ್ವಾಧೀನವಾಗಿದ್ದು, ಕಳೆದ 10 ರಿಂದ 15 ವರ್ಷಗಳು ಕಳೆದರೂ ಕೂಡಾ ಇನ್ನೂ ಹಲವು ರೈತರಿಗೆ ಭೂ ಸ್ವಾಧೀನದ ಪರಿಹಾರ ಹಣ ಕೊಟ್ಟಿರುವುದಿಲ್ಲ. ತಾವುಗಳು ಜಿಲ್ಲಾಡಳಿತಕ್ಕೆ ಶೀಘ್ರವಾಗಿ ಭೂ ಸ್ವಾಧೀನವಾದ ಜಮೀನುಗಳ ರೈತರಿಗೆ ಪರಿಹಾರ ಹಣವನ್ನು ಕೊಡಲು ಆದೇಶ ನೀಡಬೇಕು.
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮಿತಿಮೀರಿದ್ದು ಜಿಲ್ಲೆಯ ನೈಸರ್ಗಿಕ ಸಂಪತ್ತು ಲೂಟಿಕೋರರ
ಪಾಲಾಗುತ್ತಿದ್ದು, ಇದರಿಂದ ಸರಕಾರಕ್ಕೆ ಕೊಟ್ಯಾಂತರ ರೂಪಾಯಿಗಳ ರಾಜಸ್ವ ಕೈತಪ್ಪುತ್ತಿದ್ದು, ಜಿಲ್ಲೆಯ
ತುಂಗಭದ್ರ, ಕೃಷ್ಣಾ, ನದಿಗಳ ಒಡಲನ್ನು ಲೂಟಿಕೋರರು ಯಾವುದೇ ಭಯವಿಲ್ಲದೇ ರಾಜಾರೋಷವಾಗಿ
ಅಕ್ರಮ ಮರಳುಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಾಗುತ್ತಿದ್ದು, ರೈತರ
ಜಮೀನುಗಳ ಬೆಳೆಗಳು, ನಷ್ಟವಾಗುತ್ತಿವೆ. ತಕ್ಷಣವೇ ತಾವುಗಳು ಜಿಲ್ಲಾಡಳಿತಕ್ಕೆ ಅಕ್ರಮ ಮರಳು
ಗಣಿಗಾರಿಕೆಗೆ ಕಡಿವಾಣ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಆದೇಶ ಮಾಡಬೇಕೆಂದು ಮನವಿ ಸಲ್ಲಿಸಿದರು.