ಇಂದು ಬೆಂಗಳೂರಿನಲ್ಲಿ ಹೈಮೋಲ್ವೇಜ್ ಹಣಾಹಣಿಗೆ ಮಳೆಯ ಭೀತಿ ಪ್ಲೇಆಫ್ ಧ್ಯಾನದಲ್ಲಿ ಸಿಎಸ್ -ಆರ್‌ಸಿಬಿ
Voiceofjanata.in:IPL2024:Sports News:
ಪ್ಲೇಆಫ್ ಪ್ರವೇಶಿಸಿರುವ ಫೇವರಿಟ್ ತಂಡವಾದರೂ ಮಳೆಯ ಮುನ್ಸೂ ಚನೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಬಹುದು.
ಪಂದ್ಯಕ್ಕೆ ಮಳೆ ಭೀತಿ: ಆರ್‌ಸಿಬಿ ಮತ್ತು ಸಿಎಸಕೆ ನಡುವಿನ ಪ್ರಸಕ್ತ ಐಪಿಎಲ್ ರೋಚಕ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಆದರೆ ಇತ್ತಂಡಗಳ ಮಹತ್ವದ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ. ಹವಾಮಾನ ಇಲಾಖೆ, ಶನಿವಾರ ನಗರದಲ್ಲಿ ಮಳೆಯಾಗಲಿದೆ ಎಂದು ಮುನ್ನೂ ಚನೆ ನೀಡಿದೆ.
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಅಥವಾ ಸೋತರೆ ಆರ್‌ಸಿಬಿಯ ಪ್ಲೇಆಫ್ ಕನಸು ಭಗ್ನಗೊಳ್ಳಲಿದೆ. ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ 1 ಅಂಕ ಹಂಚಿಕೆ ಮಾಡಲಾಗುತ್ತದೆ. ಈಗಾಗಲೇ 14 ಅಂಕ ಹೊಂದಿರುವ ಸಿಎಸ್ ಒಟ್ಟು 15 ಅಂಕಗಳೊಂದಿಗೆ 4ನೇ ತಂಡವಾಗಿ ಪ್ಲೇಆಫ್‌ಗೆ ಮುನ್ನಡೆಯಲಿದೆ.
ಪ್ಲೇಆಫ್ ಲೆಕ್ಕಾಚಾರ:
ಬೆಂಗಳೂರು ಆಡಿರುವ 13 ಪಂದ್ಯಗಳಲ್ಲಿ6 ಗೆಲುವು, 7 ಸೋಲುಗಳೊಂದಿಗೆ ಒಟ್ಟು 12 ಅಂಕಗಳನ್ನು ಕಲೆಹಾಕಿದ್ದು, +0.387 ನೆಟ್ ರನ್ ರೇಟ್ ಹೊಂದಿದೆ. ಇನ್ನೊಂದೆಡೆ ಚೆನ್ನ ತಂಡ ಕೂಡ ಇಷ್ಟೇ ಪಂದ್ಯಗಳಿಂದ 7 ಗೆಲುವು, 6 ಸೋಲುಗಳೊಂದಿಗೆ ಒಟ್ಟು 14 ಅಂಕಗಳನ್ನು ಹೊಂದಿದ್ದು, +0.528 ರನ್ ರೇಟ್ ನೊಂದಿಗೆ ಆರ್‌ಸಿಬಿಗಿಂತ ಉತ್ತಮವಾಗಿದೆ.
ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸಬೇಕಾದರೆ, ಚೆನ್ನೈ ತಂಡವನ್ನು ಸೋಲಿಸುವುದು ಮಾತ್ರವಲ್ಲದೆ, ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಸಿಎಸ್‌ಕೆ ವಿರುದ್ದ ಮೊದಲು ಬ್ಯಾಟಿಂಗ್ ಮಾಡಿದ್ದಲ್ಲಿ ಕನಿಷ್ಠ 18 ರನ್‌ಗಳ ಅಂತರದಲ್ಲಿಹಾಗೂ ಚೇಸಿಂಗ್ ಮಾಡಿದ್ದಲ್ಲಿ 18.1 ಓವರ್‌ಗಳಲ್ಲಿಗೆಲುವು ದಾಖಲಿಸಬೇಕಿದೆ.
ಬೆಂಗಳೂರು: ಸತತ ಐದನೇ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿಪ್ಲೇಆಫ್ ಪ್ರವೇಶಿಸುವ ಗುರಿಯೊಂದಿಗೆ ಭಾನುವಾರ ಎದುರಾಗುತ್ತಿವೆ. ಆದರೆ ಈ ಋತುವಿನ ತಮ್ಮ ಕೊನೆಯ ಲೀಗ್ ಪಂದ್ಯವನ್ನಾಡುತ್ತಿರುವ ಉಭಯ ತಂಡಗಳ ಮಹತ್ವದ ಪಂದ್ಯಕ್ಕೆ ಮಳೆ ಆತಂಕಮೊಡ್ಡಿದೆ.
ಗುರುವಾರ ಪಂದ್ಯ ಮಳೆಯಿಂದಾಗಿ ರದ್ದಾಗುವುದರೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಕೋಲ್ಗೊತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಸೇರಿಕೊಂಡಿದೆ. ಇದರೊಂದಿಗೆ 3 ತಂಡಗಳು ಪ್ಲೇಆಫ್ ಹಂತವನ್ನು ಪ್ರವೇಶಿಸಿದೆ. ಕೊನೆಯ ಸ್ಥಾನಕ್ಕೆ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ತಂಡಗಳಿಗೂ ಈ ಪಂದ್ಯ ?ಮಾಡು ಇಲ್ಲವೇ ಮಡಿ? ಎನಿಸಿರುವ ಕಾರಣ ಜಿದ್ದಾಜಿದ್ದಿನ ಹೋರಾಟ ಕಂಡುಬರುವ ನಿರೀಕ್ಷೆ ಹೆಚ್ಚಾಗಿದೆ. ಆರ್ ಸಿಬಿಗಿಂತ ಹೆಚ್ಚು ಅಂಕಗಳನ್ನು ಹೊಂದಿರುವ ಜತೆಗೆ ಉತ್ತಮ ರನ್ ರೇಟ್ ಕಾಯ್ದುಕೊಂಡಿರುವ ಸಿಎಸ್ ಕೆ ತಂಡ ಮಹತ್ವ ಪಾತ್ರ ಪಡೆದಿದೆ.