ಹಿರೇಮಸಳಿಯಲ್ಲಿ ಭಗೀರಥ ಮಹರ್ಷಿ ಜಯಂತಿ
ಇಂಡಿ : ತಾಲ್ಲೂಕಿನ ಹಿರೇಮಸಳಿ ಗ್ರಾಮ ಪಂಚಾಯತಯಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು. ಘೋರ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಪೂರ್ವಜರ ಶಾಪ ವಿಮೋಚನೆಗೊಳಿಸಿ ಸಕಲ ಜೀವರಾಶಿಗಳಿಗೆ ನೀರಿನ ದಾಹವನ್ನು ತಣಿಸಿದ ಮಹಾನ್ ತಪಸ್ವಿ ಉಪ್ಪಾರ ಕುಲತಿಲಕ ರಾಜಋಷಿ ಭಗೀರಥ ಮಹರ್ಷಿ ಜಯಂತಿಯ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಶೋಕ ಮರಡಿ, ಪುಂಡಲೀಕ ಹುಬ್ಬಳ್ಳಿ, ರಾಜು ಹುಬ್ಬಳ್ಳಿ, ಶರಣು ಹತ್ತಿ, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.