ವಿಜಯಪುರ: ಜೋರಾಪುರ್ ಪೆಟ್‌ನಲ್ಲಿರುವ ಗ್ರಂಥಾಲಯದ ಹೊರ ಆವರಣದಲ್ಲಿ ಸ್ಪರ್ಧಾರ್ಥಿ ಬಳಗದಿಂದ ಸ್ವಚ್ಛತಾ ಕಾರ್ಯ ನಡೆಯಿತು. ಗ್ರಂಥಾಲಯ ಆವರಣದಲ್ಲಿ ಕಸ, ಮದ್ಯದ ಬಾಟಲ್ ಸೇರಿದಂತೆ ಬೇಡವಾದ ವಸ್ತುಗಳನ್ನು ಸ್ವಚ್ಛಗೊಳಿಸಿದರು. ಬಳಗದ ಯುವ ಮುಖಂಡ ಸದಾನಂದ್ ಗೌಡ ಪಾಟೀಲ್ ನೇತೃತ್ವದಲ್ಲಿ ಸ್ವಚ್ಛತೆ ನಡೆಯಿತು. ಈ ಸಂದರ್ಭದಲ್ಲಿ ಸದಾನಂದ ಪಾಟೀಲ್, ಸೌರಭ, ಸಮರ್ಥ್ ಕುಂಬಾರ , ಯಲ್ಲಾಲಿಂಗ ಬಗಲಿ , ಫಯಾಜ್ ನ್ಯಾಮತ್, ನಾಗನಗೌಡ ಪಾಟೀಲ ಉಪಸ್ಥಿತರಿದ್ದರು.