ಗಡಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಶಾಸಕರ ಜೊತೆ ಚರ್ಚೆ ನಡೆಸಿದ MR ಮಂಜುನಾಥ್:
ಹಂದಿಯೂರು ಶಾಸಕರ ಜೊತೆ ಗಡಿ ಗ್ರಾಮಗಳ ಅಭಿವೃದ್ಧಿಗೆ ಚರ್ಚೆ ನಡೆಸಿದ ಶಾಸಕ ಎಂಆರ್ ಮಂಜುನಾಥ್
ಹನೂರು : ತಾಲೂಕು ತಮಿಳುನಾಡಿನ ಗಡಿಯನ್ನು ಹಂಚಿಕೊಂಡಿದ್ದು, ತಮಿಳುನಾಡಿನ ಹಂದಿಯೂರು ಡಿಎಂಕೆ ಪಕ್ಷದ ಶಾಸಕರಾದ ವೆಂಕಟಚಲಂ ಅವರನ್ನು ಶಾಸಕ ಎಂ ಆರ್ ಮಂಜುನಾಥ್ ಬೇಟಿ ಮಾಡಿ, ಉಭಯ ನಾಯಕರು ಕುಶ ಲೋಪರಿ ಜೊತೆಗೆ ಕ್ಷೇತ್ರದ ಗಡಿ ಗ್ರಾಮಗಳ ಅಭಿವೃದ್ಧಿಪಡಿಸಲು ನಮ್ಮ ಜೊತೆ ಕೈಜೋಡಿಸಿ ಸಹಕಾರ ನೀಡುವಂತೆ ಚರ್ಚೆ ನಡೆಸಿದ್ದಾರೆ.
ತಾಲೂಕಿನ ಗಡಿ ಗ್ರಾಮಗಳಾದ ಹೂಗ್ಯಂ ಗ್ರಾಮ ಸೇರಿದಂತೆ ಗರಕೆ ಕಂಡಿ ರಸ್ತೆಗಳು ಸೇರಿದಂತೆ ಇನ್ನು ಹಲವು ಗಡಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ತಮಿಳುನಾಡಿನ ಕಡೆಯಿಂದಲೂ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಮೂರ್ತಿ ಬೋವಿ, ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಮಹದೇವ್, ಗ್ರಾಮ್ ಪಂಚಾಯ್ತಿ ಸದಸ್ಯ ಚಿನ್ನವೆಂಕಟ ಹಾಗೂ ಭುವನೇಶ್ವರಿ ಮೀನು, ಸಹಕಾರ ಸಂಘದ ಅಧ್ಯಕ್ಷ ತಂಗವೇಲು ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.