ಪಕ್ಷ ಸೇರ್ಪಡೆ ಹಾಗೂ ಸದಸ್ಯತ್ವ ಅಭಿಯಾನ..
ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆ:
ಬಿ ಡಿ ಪಾಟೀಲ ಹಾಗೂ ಅಯೂಬ್ ನಾಟೀಕಾರ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ.
ಇಂಡಿ : ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನೂರಾರು ಕಾರ್ಯಕರ್ತರು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಹಾಗೂ ಅಯೂಬ್ ನಾಟೀಕಾರ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಗೊಂಡರು.
ಸುಮಾರು 500 ಜನರು ಪಕ್ಷದ ತತ್ವ ಸಿದ್ಧಾಂತ ಹಾಗೂ ಬಿ ಡಿ ಪಾಟೀಲ ನಾಯಕತ್ವ ನಂಬಿ ಸದಸ್ಯತ್ವ ಪಡೆದರು. ಕಾರ್ಯಕ್ರಮದಲ್ಲಿ ಬಿ ಡಿ ಪಾಟೀಲರು ಮಾತನಾಡುತ್ತಾ ಜೆಡಿಎಸ್ ಪಕ್ಷ ಜ್ಯಾತ್ಯಾತೀತಪರ, ರೈತಪರ, ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಹಾಗೂ ವಿಶೇಷವಾಗಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ ರಾಜ್ಯದಲ್ಲಿ ಮುಂಚೂಣಿ ಪಕ್ಷವಾಗಿದೆ ಎಂದು ಮಾತನಾಡಿದರು.
ನಂತರ ಜೆಡಿಎಸ್ ಮುಖಂಡರಾದ ಅಯೂಬ್ ನಾಟೀಕಾರ ಮಾತನಾಡಿ ರಾಜ್ಯದಲ್ಲಿ ರೈತಪರ ಬಡ ವರ್ಗಗಳ ಕಲ್ಯಾಣಕ್ಕಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅನಿವಾರ್ಯ ಎಂದು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗೌಡ ಪಾಟೀಲ್ ಮಾತನಾಡುತ್ತಾ ರಾಷ್ಟ್ರೀಯ ಪಕ್ಷಗಳು ಮತೀಯ ವಿಷಯಗಳ ಮೇಲೆ ರಾಜಕಾರಣ ಮಾಡುತ್ತಾ ಜನರ ಮದ್ಯ ಕಲಹ ಮೂಡಿಸಿ ರಾಜಕಾರಣ ಮಾಡುತ್ತಾ ಅಭಿವೃದ್ಧಿ ಮರಿತಿವೆ ಎಂದರು.
ಕಾರ್ಯಕಮದಲ್ಲಿ ಭಾಷಾಸಾಬ ಇಂಡಿಕರ ನೇತೃತ್ವದಲ್ಲಿ ಸುಮಾರು 500 ಯುವಕರು ಜೆಡಿಎಸ್ ಸೇರ್ಪಡೆ ಗೊಂಡರು. ಸಿದ್ದು ಡಂಗಾ ಮಹಿಬೂಬ ಬೇವನೂರ, ನಿಯಾಝ್ ಅಗರಖೇಡ ಇರ್ಫಾನ್ ಅಗರಖೇಡ, ದುಂಡು ಬಿರಾದಾರ ರಾಜು ಮುಲ್ಲಾ, ಕೇಶವ ರಾಠೋಡ , ಧನಸಿಂಗ ಪವಾರ್, ವಿಠಲ ರಾಠೋಡ, ಇಸಾಕ್ ಸೌದಾಗರ, ತುಕಾರಾಂ ಚೌವ್ಹಾಣ್,ಮಹಿಬೂಬ ಬಾಗವಾನ, ಗಣಿಸಾಬ ಇಂಡಿಕರ, ಅಶಲಾಮ ಇಂಡಿಕರ, ಹಾಗೂ ಇಂಡಿಕರ ವಸ್ತಿಯ ನೂರಾರು ರೈತರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.