ಕೋಣಾಸುರನ ಯುದ್ದದಲ್ಲಿ ಕುರುಬರನ್ನು ರಕ್ಷಿಸಿದ್ದು, ಬೀರದೇವರು : ಜಕ್ಕಣ ಶಾಸ್ತ್ರಿ
ಇಂಡಿ: ಸತ್ಯಯುಗದಲ್ಲಿ ಸಾಧು-ಸಂತರಿಗೆ ರಾಕ್ಷಸರ ಉಪಟಳ ಹೆಚ್ಚಾಗಿ ಅನೀತಿ ಅತ್ಯಾಚಾರ ತಾಂಡವಾಡುವ ಸಮಯದಲ್ಲಿ ಕೈಲಾಸದಿಂದÀ ಶಿವ ಶಂಕರನ ಅಂಶವಾಗಿ ಸೂರಮ್ಮದೇವಿ ಹಾಗೂ ಆಕಾಶ ಬ್ರಹ್ಮನ ಮಗನಾಗಿ ಶಿವಸಿದ್ಧ ಭೀರೇಶ್ವರ ಜನನವಾಗುತ್ತಾನೆ ಎಂದು ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಜಕ್ಕಣ್ಣ ಮಾಸ್ತರ(ಶಾಸ್ತಿç) ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದ ಶಿವಸದ್ಧ ಬೀರಲಿಂಗೇಶ್ವರ ಮಹಾಪುರಾಣ ಕಾರ್ಯಕ್ರಮದಲ್ಲಿ ಬರುವ ಬೀರದೇವರ ತೊಟ್ಟಿಲೊತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀರದೇವರ ಜನಸಿದ ಐದು ದಿನಕ್ಕೆ ತೊಟ್ಟಿಲ ಕರ‍್ಯ ಮುಗಿಸಿದ ತಾಯಿ ಅಷ್ಟರಲೇ ನಾರಾಯಣ್ಣಗೌಡ ಜ್ಯೋತಿಷ ರೂಪದಲ್ಲಿ ಬಂದು. ತಾಯಿ ಸೂರಮ್ಮದೇವಿಗೆ ಹೇಳುತ್ತಾನೆ. ದೇವಿ ನಿನ್ನ ಮಗನಿಂದ ನಿನ್ನ ಜೀವಕ್ಕೆ ಅಪಾಯವಿದೆ. ನಿನ್ನ ಅಣ್ಣನಿಗು ಅಪಾಯವಿದೆ ತಕ್ಷಣ ನಿನ್ನ ಮಗನ್ನು ಅಡವಿ ಅರಣ್ಯದಲ್ಲಿ ಬಿಟ್ಟ ಬಾ ಎಂದು ಹೇಳುತ್ತಾನೆ. ನಂತರ ತಾಯಿ ಸೂರಮ್ಮದೇವಿ ದೈತರನ್ನು ಕೊಟ್ಟು ಮಗುವಿಗೆ ಅಡವಿಲ್ಲಿ ಬಿಟ್ಟು ಬಾ ಅಂತ ಹೇಳಿ ಕಳಿಸುತ್ತಾಳೆ. ಆ ಸಂದರ್ಭದಲ್ಲಿ ಸೂರಮ್ಮದೇವಿ ಮಾಡಿದ ಪಂಚಾಮೃತ ಅಡುಗೆಯನ್ನು ದೈತರು ಊಟಮಾಡಿ ಬೀರದೇವರನ್ನು ಜೀವಕ್ಕೆ ಅಪಯಮಾಡದೆ ಬಿಟ್ಟು ಬರುತ್ತಾರೆ. ಅಡವಿಯಲ್ಲಿ ಬೀರಣ್ಣನನ್ನು ಪಾರ್ವತಿ ಸಂರಕ್ಷಣೆ ಮಾಡುತ್ತಾಳೆ. ಮುಂದೆ ಈತ ದೊಡ್ಡವನಾಗಿ ಕೋಣಾಸುರನ ಯುದ್ದದಲ್ಲಿ ಕುರುಬರನ್ನು ರಕ್ಷಿಸಿ ಅವರಿಗೆ ಪೂಜ್ಯನಾಗುತ್ತಾನೆ. ಅವರೆ ನಮ್ಮ ಬೀರದೇವರು.
ಈ ಸಂದರ್ಭದಲ್ಲಿ ನೆರೆದ ಸದ್ಯಕ್ತರು ಶಂಖನಾದದ ಮೂಲಕ ಭೀರದೇವರಿಗೆ ಉಘೇ, ಉಘೇ ಎಂದು ಜೈಕಾರ ಹಾಕಿ ವೈಶಿಷ್ಟತೆಯನ್ನು ಮೆರೆದರು.
ಈ ಸಂದರ್ಭದಲ್ಲಿ ಪಿ.ಜಿ.ಕಲ್ಮನಿ, ವಿ.ಜಿ.ಕಲ್ಮನಿ, ಶಂಕರಗೌಡ ಪಾಟೀಲ, ಸಿದ್ದರಾಯ ಹಂಜಗಿ, ಹಣುಮಂತರಾಯ ಮಹಾರಾಯ ಕಲ್ಮನಿ, ಹೂವಣ್ಣ ಪೂಜಾರಿ, ಸಂಗಪ್ಪ ಉಪ್ಪಿನ, ಬಸವರಾಜ ತೇಲಿ, ಬಸವರಾಜ ಸೋಲಾಪುರ, ಬಸವರಾಜ ಅಜುಣಗಿ, ಘಂಟೆಪ್ಪ ಕುಂಬಾರ, ಆನಂದ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಇಂಡಿ: ಹಿರೇಬೇವನೂರ ಗ್ರಾಮದ ಶಿವಸದ್ಧ ಬೀರಲಿಂಗೇಶ್ವರ ಮಹಾಪುರಾಣ ಕಾರ್ಯಕ್ರಮದಲ್ಲಿ ಬರುವ ಬೀರದೇವರ ತೊಟ್ಟಿಲೊತ್ಸವ ಕಾರ್ಯಕ್ರಮದಲ್ಲಿ ಜಕ್ಕಣ್ಣ ಮಾಸ್ತರ(ಶಾಸ್ತಿç) ಮಾತನಾಡಿದರು.