ಇಂಡಿಯಲ್ಲಿ ಗಾಣಿಗ ಸಮಾಜದ ಬೃಹತ್ ಸಮಾವೇಶ..!
ಇಂಡಿ: ಪಟ್ಟಣದ ವಿಜಯಪೂರ ರಸ್ತೆಯ ಕ್ರೀಡಾಂಗಣ
ಪಕ್ಕದಲ್ಲಿ ಫೆ. 24 ರಂದು ವಿಜಯಪುರ ಜಿಲ್ಲಾ
ಗಾಣಿಗ ಸಮಾಜದ ಬೃಹತ್ ಸಮಾವೇಶ ಹಾಗೂ
ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಸಭಾ ಭವನ
ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಸರ್ವ
ಸಮುದಾಯದ ಜನರು ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳುವಂತೆ ಗಾಣಿಗ ಸಮಾಜದ ಅಧ್ಯಕ್ಷ ಎ.ಎಸ್.
ಗಾಣೀಗೇರ, ಮುಖಂಡ ಸಿದ್ದಲಿಂಗ ಹಂಜಗಿ ಮನವಿ
ಮಾಡಿದರು.
ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಗಾಣಿಗ ಸಮಾಜದ ಗುರು ಪೀಠಾಧ್ಯಕ್ಷ ಡಾ. ಜಯ ಬಸವಕುಮಾರ ಸ್ವಾಮೀಜಿ ಅವರ ಪ್ರೇರಣಾ ಶಕ್ತಿಯಿಂದ ಇಂಡಿಯಲ್ಲಿ 2021 ರ ಫೆ.7 ರಂದು ನಡೆದ ಗಾಣಿಗ ಸಮಾಜ ಜನ ಜಾಗೃತಿ ಸಭೆಯಲ್ಲಿ
ಸಮಾಜದ ಹಿರಿಯರು ಕೈಕೊಂಡ ನಿರ್ಧಾರದಂತೆ 2
ಎಕರೆ ನಿವೇಶನ ಖರೀದಿಸಿದ್ದರ ಪ್ರತಿಫಲ ಈಗ
ಸಭಾಭವನ ಭೂಮಿಪೂಜೆ ನಡೆಯುತ್ತಿದೆ
ಎಂದರು.
ಗಾಣಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು
ಸರಕಾರದಿಂದ 5 ಕೋಟಿ ರೂ ಅನುದಾನ ನೀಡುವ
ಭರವಸೆ ನೀಡಿದ್ದರು. ಈ ಪೈಕಿ ಈಗಾಗಲೇ ಎರಡು
ಕೋಟಿ ಮಂಜೂರು ಮಾಡಿದ್ದಾರೆ. ಶಾಸಕರ
ಅಪೇಕ್ಷೆಯ ಮೇರೆಗೆ ಆ ನಿವೇಶನದಲ್ಲಿ ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ಅಂದಾಜು 5 ಕೋಟಿ
ರೂ ವೆಚ್ಚದಲ್ಲಿ ಸಭಾಭವನ ನಿರ್ಮಿಸಲು
ನಿರ್ಧರಿಸಿದ್ದು ಬಾಕಿ 3 ಕೋಟಿ ರೂ ಹಣವನ್ನು
ಸರಕಾರದಿಂದ ಶಾಸಕರೇ ಕೊಡಿಸುವದಾಗಿ
ಒಪ್ಪಿಕೊಂಡಿದ್ದಾರೆ ಎಂದರು.
ಸಮಾರಂಭದ ದಿವ್ಯ ಸಾನಿದ್ಯ ಡಾ. ಜಯಕುಮಾರ
ಜಗದ್ಗುರುಗಳು ಗಾಣಿಗ ಪೀಠ, ವಿಜಯಪುರದ
ಸಿದ್ಧ ಮುತ್ಯಾ, ಅಡವಿಲಿಂಗ ಮಹಾಸ್ವಾಮಿಗಳು ತಿಂಥಿಣಿ,
ಶಂಕರಾನಂದ ಶ್ರೀಗಳು ಚಳಕಾಪುರ, ಮಾತೋಶ್ರೀ ಸುಗಲಮ್ಮ ತಾಯಿ ಮುಕ್ತಿ ಮಂದಿರ ಹಿರೇರೂಗಿ,
ವಹಿಸಲಿದ್ದು ಗಣ್ಯರಾದ ಅಥಣಿ ಶಾಸಕ ಲಕ್ಷ್ಮಣ ಸವದಿ, ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಗಿಗೌಡರ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ, ವಿಜಯಪುರದ
ಶಾಸಕ ಬಸನಗೌಡ ಪಾಟೀಲ, ಇಂಡಿಯ ಶಾಸಕ
ಯಶವಂತರಾಯಗೌಡ ಪಾಟೀಲ, ಸಿಂದಗಿಯ ಶಾಸಕ
ಅಶೋಕ ಮನಗೂಳಿ, ದೇವರ ಹಿಪ್ಪರಗಿ ಶಾಸಕ
ರಾಜುಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ
ಕಟಕದೊಂಡ, ಮಾಜಿ ಶಾಸಕರಾದ ರಮೇಶ
ಭೂಸನೂರ, ಎಸ್.ಕೆ.ಬೆಳ್ಳುಬ್ಬಿ, ಶಿವರಾಜ ಸಜ್ಜನರ,
ಆನಂದ ನ್ಯಾಮಗೌಡ, ಚಿತ್ರನಟ ದೊಡ್ಡಣ್ಣ ಸೇರಿದಂತೆ
ಅನೇಕ ಗಣ್ಯರು ಆಗಮಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬತ್ತು ಸಾವಕಾರ ಬಸಗೊಂಡ, ರಾಮು ಯಂಕಂಚಿ, ಬಾಬು ಯಳಸಂಗಿ,
ಡಾ|| ಎಂ.ಎಚ್.ಅಂಕಲಗಿ, ಭೀಮನಗೌಡ ಪಾಟೀಲ, ನೌಕರ ಸಂಘದ ತಾಲೂಕು ರವಿ ಗಿಣ್ಣಿ ಮತ್ತಿತರರಿದ್ದರು.
ಇಂಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಗಾಣಿಗ ಸಮಾಜದ ಗಣ್ಯರು
ಮಾತನಾಡಿದರು.