ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜಾ
ಅಧಿಕಾರ, ಮನೆ, ಮಠ, ಯಾವುದು ಸ್ಥಿರವಲ್ಲ..! ಶಾಸಕ ಅಶೋಕ ಮನಗೂಳಿ
ಇಂಡಿ : ಜೀವನದುದ್ದಕೂ ಜಗತ್ತಿನ ಆಗೂ ಹೋಗುಗಳ ಬಗ್ಗೆ ಅವರ ಜ್ಞಾನದಿಂದ ಜಗತ್ತಿಗೆ ಒಳ್ಳೆ ಸಂದೇಶಗಳನ್ನು ನೀಡಿದ್ದಾರೆ.ಯಾವ ವ್ಯಕ್ತಿ ಬಳಿ ಹೃದಯ ಶ್ರೀಮಂತಿಕೆ ಇರುತ್ತದೋ ಆ ವ್ಯಕ್ತಿ ಜಗತ್ತಿನಲ್ಲಿರುವ ಎಲ್ಲವನ್ನು ಗೆಲ್ಲಲು ಸಾಧ್ಯವಾಗುತ್ತದೆ ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲ್ಲೂಕಿನ ತಾಂಬಾ ಗ್ರಾಮದ ಹನುಮಾನ ದೇವಸ್ಥಾನ ಕ್ಕೆ ರೂ ೧೫ ಲಕ್ಷ ಮತ್ತು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ರೂ ೧೦ಲಕ್ಷ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಯಾವುದೇ ಮನುಷ್ಯನಿಗೆ ಸಿರಿ, ಸಂಪತ್ತು, ಬೆಳ್ಳಿ, ಬಂಗಾರ ಶಾಶ್ವತವಲ್ಲ. ಭೂಮಿ ಮೇಲೆ ಶಾಶ್ವತವಾಗಿ ಇರುವುದು ನೀರು, ಅನ್ನ, ಭೂಮಿ, ಗಾಳಿ, ಬೆಳಕು ನಿತ್ಯವಾಗಿ ಇರುತ್ತದೆ ಹೊರತು ಸಿರಿ, ಸಂಪತ್ತು ಬೆಳ್ಳಿ, ಬಂಗಾರ ಶಾಸ್ವತವಲ್ಲ. ಅಧಿಕಾರ, ಮನೆ, ಮಠ, ಯಾವುದು ಕೂಡಾ ಸ್ಥಿರವಲ್ಲ. ಹೀಗಾಗಿ ನಾವು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ದಿಂದ ಮತ್ತು ವಿಶಾಲ ಹೃದಯ, ಮನಸ್ಸಿನಿಂದ ಬೆರೆಯಬೇಕು. ಅಂದಾಗ ಮಾತ್ರ ಮನುಷ್ಯನಿಗೆ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯಿಂದ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.
ರಜಾಕ ಚಿಕ್ಕಗಸಿ, ರಾಚಪ್ಪ ಗಳೇದ, ಪರಶುರಾಮ ಬಿಸನಾಳ, ನೂರಹ್ಮದ ಅತ್ತಾರ, ಕೆ.ಎನ್. ಪಾಟೀಲ, ನಾಗಪ್ಪ ಕುರಬತ್ತಳಿ, ವಿಜಯಕುಮಾರ ದೊಡ್ಡಮನಿ, ಅಪ್ಪಸಾಹೇಬ ಅವಟಿ, ಗೋಪಾಲ ಅವರಾದಿ, ಸಿದ್ದಪ್ಪ ದಿವಟಗಿ, ಫತ್ತೆಸಾಬ ಉಜನಿ, ಅಮರ್ ವಸ್ತçದ, ಜಕ್ಕಪ್ಪ ತ.ಹತ್ತಳ್ಳಿ, ಉಪಸ್ಥಿತರಿದ್ದರು.
ತಾಂಬಾ ಗ್ರಾಮದ ಹನುಮಾನ ದೇವಸ್ಥಾನ ಕ್ಕೆ ರೂ ೧೫ ಲಕ್ಷ ಮತ್ತು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ರೂ ೧೦ಲಕ್ಷ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಸಿದ್ದು ಹತ್ತಳ್ಳಿ ಭೂಮಿ ಪೂಜಾ ನೆರವೇರಿಸುತ್ತಿರವುದು.