ಇಂಡಿ : ಮರಗೂರಿನ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಟನ್‌ಗೆ 2400 ನಗದು ನಿಗದಿ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನು ಕಬ್ಬು ಪೂರೈಸಿದ ರೈತರಿಗೆ 2400 ನಗದುನಂತೆ ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಪಾವತಿಸಲಾಗುವುದು ಎಂದರು.
ಇನ್ನು ಕಬ್ಬಿನ ದರ ಘೋಷಣೆ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2020-21 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪ್ರತಿ ಟನ್‌ಗೆ ರೂ 2300 ನಿಗಧಿ ಮಾಡಿದ್ದು, ಅದರಲ್ಲಿ ಪ್ರತಿ ಟನ್‌ಗೆ ರೂ 100 ಷೇರು ಕಟಾಯಿಸಿಕೊಳ್ಳಲು ನಿರ್ಣಯಿಸಲಾಗಿತ್ತು. ಸದರಿವಾರ್ಷಿಕ ಮಹಾಸಭೆಯಲ್ಲಿ ಕಾರ್ಖಾನೆಯು ಲಾಭಾಂಶವಾದಲ್ಲಿ ಅದನ್ನು ರೈತರಿಗೆ ಸಂದಾಯ ಮಾಡಲಾಗುವುದೆಂದು ನಿರ್ಣಯಿಸಲಾಗಿತ್ತು.
ಅದರಂತೆ 2400 ನಗದನ್ನು ಮಂಡಳಿಯವರು ನಿರ್ಧರಿಸಿದ್ದಾರೆ. ಈ ಮೊತ್ತದಲ್ಲಿ ಯಾವುದೇ ತರಹದ ಷೇರು ಮೊತ್ತ ಕಡಿತಗೊಳಿಸಲಾಗುವುದಿಲ್ಲ. ಈ ಭಾಗದಲ್ಲಿ ಕಾರ್ಖಾನೆಯ ಎಲ್ಲ ಕಾರ್ಖಾನೆಗಳಿಗಿಂತ ಹೆಚ್ಚಿನ ಕಬ್ಬಿನಬಿಲ್ಲ ಕೊಡಲಾಗುವುದೆಂದು ಸಂತೋಷವೆನಿಸುತ್ತದೆ ಎಂದರು.