ಎಲ್ಲರೂ ಸಮಾನರು ಎಂದು ಬೋಧಿಸಿದ ಬಸವಣ್ಣನವರು.
ಇಂಡಿ: ವಿಶ್ವಗುರು ಬಸವಣ್ಣ ಸಾಂಸ್ಕøತಿಕ ನಾಯಕರು
ಅನುಭವ ಮಂಟಪದ ಮೂಲಕ ಲಿಂಗ, ಜಾತಿ, ಸಮಾನತೆ
ಒತ್ತು ಕೊಟ್ಟವರು. ಸಮಾಜದಲ್ಲಿ ಮೇಲು ಕೀಳೆಂಬ
ಭಾವನೆ ಇರಬಾರದು. ಎಲ್ಲರೂ ಸಮಾನರು ಎಂದು
ಬೋಧಿಸಿ ಆಚರಣೆ ಮಾಡಿದವರು ಎಂದು ಕಂದಾಯ
ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಶನಿವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸಾಂಸ್ಕøತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಗೊಳಿಸಿ ಅವರು ಮಾತನಾಡಿದರು.
ಶಿಕ್ಷಕ ಬಸವರಾಜ ಗೊರನಾಳ ಮಾತನಾಡಿ, ಅಂದಿನ ಕಾಲದಲ್ಲಿ ಕಾಯಕ, ಸ್ತ್ರೀ ಸಮಾನತೆ, ಮಹತ್ವ ಕೊಡುವ
ಮೂಲಕ ಜಾತಿಯತೆಯನ್ನು ಅಳಿಸಲು ಪ್ರಧಾನ
ಆಧ್ಯತೆಯನ್ನು ನೀಡಿ ಭಕ್ತಿ ಮಾರ್ಗ ಪ್ರತಿಪಾದಿಸಿದ
ಅಪರೂಪದ ವಿಶ್ವಗುರು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಮಂಜುಳಾ ನಾಯಕ,
ಶಿರಸ್ತೆದಾರ ಎಸ್.ಆರ್. ಮುಜಗೊಂಡ, ಎಂ.ಪಿ. ಕೊಡತೆ,
ಬಸವರಾಜ ರಾಹೂರ, ಎಚ್.ಎಚ್. ಗುನ್ನಾಪುರ, ಆರ್.ಬಿ. ಮೂಗಿ, ಗ್ರೇಡ್ 2 ತಹಸೀಲ್ದಾರ ಧನಪಾಲಶೆಟ್ಟಿ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಭೀಮಾಶಂಕರ ಕಾರ್ಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ ಮತ್ತಿತರಿದ್ದರು.
ಇಂಡಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸಾಂಸ್ಕøತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಗೊಳಿಸಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.