ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ
ಇಂಡಿ : ಅರ್ಥಗಾ ಗ್ರಾಮದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಮಾತನಾಡುತ್ತಾ ನಾನಾ ನನ್ನ ಜೀವನವನ್ನು ಜನಸಾಮಾನ್ಯರ ಹಾಗೂ ರೈತರ ಬದುಕಿಗಾಗಿ ಮೀಸಲಾಗಿಟ್ಟಿದ್ದೇನೆ. ಈ ಬಾಗ ನೀರಾವರಿ ಯೋಜನೆಯಿಂದ ವಂಚಿತ ಗ್ರಾಮಗಳ ನೀರಾವರಿಗಾಗಿ ಸೇವೆ ಎಂದು ಮಾತನಾಡಿದರು.ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ ಮಾತನಾಡುತ್ತಾ ಬರದ ನಾಡಿನ ಭಗೀರಥ ಸನ್ಮಾನೆ ದೇವೇಗೌಡರು ಈ ಭಾಗದ ನೀರಾವರಿ ಯೋಜನೆಯ ಹರಿಕಾರ ಅವರ ನೇತೃತ್ವದ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರಿಗೆ ಆಶೀರ್ವಾದ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕ ರವಿಕಾಂತ್ ಪಾಟೀಲ ಮಾತನಾಡುತ್ತಾ ನೀರಾವರಿ ಹೋರಾಟಗಳ ಮುಂತಾದ ಜನಸೇವೆ ಮಾಡಬೇಕು ಎಂದು ನಿರಂತರವಾಗಿ ಹಗಲಿರುಳು ದುಡಿಯುವ ನಾಯಕನನ್ನು ಆಯ್ಕೆ ಮಾಡುವ ಮುಖಾಂತರ ಬಡ ವ್ಯಕ್ತಿಯಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಮಾತನಾಡುತ್ತಾ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೂಂದಿದ ಬಿ ಡಿ ಪಾಟೀಲರು ಈ ತಾಲೂಕಿಗೆ ಅವಶ್ಯಕತೆ ಇದೆ ಎಂದು ಮಾತನಾಡಿದರು. ಹಿರಿಯ ಧುರೀಣ ಅಶೋಕಗೌಡ ಬಿರಾದಾರ ಮಾತನಾಡಿ ನಾನು ಸುಮಾರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಬೇಸತ್ತು ಇಂದು ಸಾಲಮನ್ನಾದ ರೋವಾರಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪಂಚರತ್ನ ಯೋಜನೆಯನ್ನು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೂಂದಿದ ಬಿ ಡಿ ಪಾಟೀಲರನ್ನು ಬೆಂಬಲಿಸಿ ಜೆಡಿಎಸ್ ಸೇರ್ಪಡೆ ಗೋಂಡಿದ್ದೇನೆ ಎಂದು ಮಾತನಾಡಿದರು. ಮುಖಂಡ ನಾಗೇಶ ತಳಕೇರಿ ಮಾತನಾಡಿ ದಲಿತರ ಪರವಾಗಿ ಸೇವೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಜೆಡಿಎಸ್ ಮುಖಂಡ ಆರ್ ಕೆ ಪಾಟೀಲ್, ಪಂಚಪ್ಪ ಕಲಬುರಗಿ, ಮಲ್ಲಿಕಾರ್ಜುನ ಯಂಡಿಗೇರಿ, ಶ್ರೀಶೈಲಗೌಡ ಪಾಟೀಲ, ರಾಮು ರಾಠೋಡ, ಅಕ್ತರ್ ಪಟೇಲ್, ಅಯೋಬ ನಾಟೀಕರ ಮಾತನಾಡಿದರು. ಜಬ್ಬಾರ್ ಅಣ್ಣಾ ಅರಬ್,ಟಿ ಎಸ್ ಪೂಜಾರಿ, ರೇವಣಸಿದ್ದ ಗೋಡಕೆ ಲಕ್ಮಣ ಪೂಜಾರಿ, ಕರೇಪ ಬಸನಾಳ, ಮಳಸಿದ್ದ ಬ್ಯಾಳಿ, ಕಲ್ಲಪ್ಪ,ಗುಳಗಿ, ಚಾಂದ ಮುಲ್ಲಾ, ಚಿದಾನಂದ ಜಂಗಬಿ, ಕುಲಪ್ಪ ವಟಾರ, ಯೂಸುಫ್ ಮಣೂರ, ಅಶೋಕ ನಿಂಬಾಳ, ನಿಂನಗೌಡ ಬಿರಾದಾರ, ಶಿವಪ್ಪಾ ಬಂಗಾರಿ,ಜಿತು ರಾಠೋಡ, ಮನೋಹರ ಸೋಡ್ಡಗಿ ಪ್ರಕಾರ ರಾಠೋಡ, ಮಲಕ್ಕಣಗೌಡ ಬಿರಾದಾರ, ರಾಜು ಬಿರಾದಾರ ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.