ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ
ವಿಜಯಪುರ : ನಗರದ ಶ್ರೀ ಮದಲಾ ಮಾರುತಿ ದೇವಸ್ಥಾನದಲ್ಲಿ ದೇಶ ರಕ್ಷಕರ ಪಡೆ ಹಾಗು ಮೌನೇಶ್ವರ ಫೌಂಡೇಶನ್ ಸಹಯೋಗದಲ್ಲಿ ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ ಸಲ್ಲಿಸಿ ಪಾಪಿ ಪಾಕಿಸ್ತಾನದ ಮೇಲೆ ನೆಡೆದ ದಾಳಿಯನ್ನು ಸಂಭ್ರಮಿಸಿದರು. ದೇಶ ರಕ್ಷಕರ ಪಡೆ ಸಂಸ್ಥಾಪಕ ಬಿಜೆಪಿ ಕಾರ್ಯದರ್ಶಿ ರೋಹನ್ ಆಪ್ಟೆ ಮಾತನಾಡಿ ಪೆಹಲಗಾಮದಲ್ಲಿ ಹಿಂದು ಪ್ರವಾಸಿಗರ ಬರ್ಬರ ಕೊಲೆ ಮಾಡಿ ಮುಂದೆ ಈ ಘಟನೆಯಿಂದ ಭಾರತದಲ್ಲಿ ಗೃಹಯುದ್ಧ ಸೃಷ್ಟಿಸಿ ಹಿಂದು ಮುಸ್ಲಿಂ ನಡುವೆ ಸಾಘರ್ಷ ಸೃಷ್ಟಿಸುವ ಹುನ್ನಾರ ವಿಫಲವಾಗಿದೆ. ಧರ್ಮ ಆಮೇಲೆ ದೇಶ ಮೊದಲು ಎಂಬುವುದನ್ನು ನಾವು ಭಾರತೀಯರು ಸಿದ್ಧಪಡಿಸಿದ್ದೇವೆ ಅಂದರು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ವಿಪಕ್ಷಗಳು ಕೂಡಾ ಒಂದಾಗಿ ಪಾಪಿ ಪಾಕಿಸ್ತಾನ ವಿರುದ್ಧ ಮುಗಿಬಿದ್ದಿದ್ದು ನಮ್ಮ ಏಕತೆ ತೋರಿಸಿದೆ ಅಂದರು.
ದೇಶ ರಕ್ಷಕರ ಪಡೆ ಅಧ್ಯಕ್ಷರಾದ ಆಕಾಶ ಇಂಡಿ ಮಾತನಾಡಿ ನಾವು ಭಾರತೀಯ ಸೇನೆ ಮತ್ತು ಸರ್ಕಾರ ಜೊತೆಗಿದ್ದೇವೆ ಅವಶ್ಯಕತೆ ಬಿದ್ದರೆ ನಮ್ಮ ಸಂಘಟನೆ ಸದಸ್ಯರು ಸೇನೆಯ ಸೇವೆ ಮಾಡಲು ಸಜಾಗಿದ್ದೇವೆ ಅಂದರು.
ಮೌನೇಶ್ವರ ಪೌಂಡೇಶನ್ ಅಧ್ಯಕ್ಷ ವಿನೋದ ಪತ್ತಾರ ಮಾತನಾಡಿ ಭಾರತೀಯ ಯೋಧರು ಕ್ಷೇಮ ಮತ್ತು ದೈರ್ಯಕ್ಕಾಗಿ ಪೂಜೆ ಮತ್ತು ಸಂಕಲ್ಪ ಮಾಡಿದ್ದೇವೆ. ಇದು ಹೊಸ ಭಾರತದ ಹೊಸ ಅಧ್ಯಾಯವಿದೆ ಅಂತ ಹೇಳಲು ಇಚ್ಛಿಸುತ್ತೇನೆ ಅಂದರು.
ಈ ಸಂಧರ್ಭದಲ್ಲಿ ಜಗದೀಶ ರೂಗಿಮಠ,ವಿವೇಕ ತಾವರಗೇರಿ, ಹರಿಷಭಟ ಜೋಶಿ, ಕೃಷ್ಣಾ ಮಾಯಾಚಾರಿ , ಮನೋಜ ಅರಕೇರಿ, ಮುತ್ತು ಬಡಿಗೇರ, ವೆಂಕಟೇಶ ಸರಾಫ್ ಉಪಸ್ಥಿತರಿದ್ದರು.