ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ
ಜಾತಿ/Code ಛಲವಾದಿ (Code-027.1) Chalavadi ಎಂದೇ ಬರೆಯಿಸಿ “ ಜಾಗೃತರಾಗಿ
ಇಂಡಿ : ನಮ್ಮ ಬಲಗೈ ಸಮುದಾಯವರು ಇನ್ನೂ ಎಷ್ಟು ವರ್ಷ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸರಿಯಾಗಿ ಮೀಸಲಾತಿ ಸಿಗದೆ ಕೆಟ್ಟ ಪರಿಸ್ಥಿತಿ ಅನುಭವಿಸಬೇಕು. ಈಗ ರಾಜ್ಯ ಸರ್ಕಾರ ಉತ್ತಮ ಅವಕಾಶ ಕೊಟ್ಟಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಲು ಜಾತಿ ಸಮೀಕ್ಷೆಯಲ್ಲಿ ಬಲಗೈ ಗುಂಪಿನವರು ಛಲವಾದಿ ಎಂದು ಬರೆಯಿಸಿ ಎಂದು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಕಾಂಬಳೆ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಹುತೇಕವಾಗಿ ನಮ್ಮ ಜನಾಂಗದವರು ಸರಕಾರಿ ಮೀಸಲಾತಿಯಿಂದ ವಂಚಿರಾಗುತ್ತಿದ್ದೆವೆ. ಇವತ್ತಿಗೂ ಸಿಗದ ಮೀಸಲಾತಿ ಸರಿಯಾಗಿ ದೊರೆಯುತ್ತಿಲ್ಲ. ಆದರೆ ಈಗ ಸಿಕ್ಕಿರುವ ಸುವರ್ಣ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಕರೆ ನೀಡಿದರು
ಕರ್ನಾಟಕ ರಾಜ್ಯ ಸರಕಾರ ಈ ಛಲವಾದಿ ಬಲಗೈ ಗುಂಪಿಗೆ ವಾಸ್ತವಿಕವಾಗಿ ದೊರಕಬೇಕಾಗಿರುವ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚು-ಕಡಿಮೆಯಾಗಿ ಸಕರಕಾರದಿಂದ ದೊರೆಯುತ್ತಿರುವ ಸೌಲಭ್ಯಗಲು ಶಿಕ್ಷಣ, ಉದ್ಯೋಗ, ರಾಜಕೀಯ, ಪ್ರಾತಿನಿದ್ಯ, ಆರೋಗ್ಯ, ಕೃಷಿ, ತೋಟಗಾರಿಕೆ, ಕೈಗಾರಿಕೆ, ವಾಣಿಜ್ಯ, ಪಶುಸಂಘೋಪನೆ, ಹಾಗೂ ಇತರೆ ಕ್ಷೇತ್ರಗಳಲ್ಲಿ ಸಿಗುತ್ತಿರುವ ಸೌಲಭ್ಯಗಳಿಂದ ನಾವುಗಳು ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆ. ಉಪಜಾತಿ/ಮೂಲಜಾತಿಯ ಮಾಹಿತಿಯನ್ನು ಸರಿಯಾಗಿ ನಮೂದಿಸದೇ ಇದ್ದರೆ ಜನಸಂಖ್ಯೆಗೆ ಅನಿಗುಣವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ದೊರೆಯುತ್ತಿರುವ ಸೌಲಭ್ಯಗಳು ದೊರಕುವುದಿಲ್ಲ.
ಛಲವಾದಿ ಸಮುದಾಯದ ಹಿರಿಯರು ಕಿರಿಯರು ಮತ್ತು ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಜಾತಿ ಸಮೀಕ್ಷೆ ಪ್ರಕ್ರಿಯೆಯಲ್ಲಿ ಮಗ್ನರಾಗಬೇಕು. ಪ್ರತಿ ವ್ಯಕ್ತಿ ಮತ್ತು ಕುಟುಂಬಗಳನ್ನು ಜಾತಿ ಸಮೀಕ್ಷೆಗೆ ಒಳಪಡಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿರುತ್ತದೆ. ಒಂದೇ ಒಂದು ವ್ಯಕ್ತಿ ಅಥವಾ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಬಿಟ್ಟು ಹೋದರೆ ಅದರ ಪರಿಣಾಮವನ್ನು ಶತಶತಮಾನಗಳವರೆಗೂ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಜಾತಿ ಸಮೀಕ್ಷೆ ಮೇ-5 ರಿಂದ ಮೂರು ಹಂತಗಳಲ್ಲಿ ಈ ಕೆಳಕಂಡಂತೆ ಸರಕಾರವು ನಿಗದಿಪಡಿಸಲಾಗಿದೆ.
1ನೇ ಹಂತ
ಗಣತಿದಾರರು ಮನೆ-ಮನೆ ಬೇಟಿನೀಡಿ ಸಮೀಕ್ಷೆ ಕೈಗೊಳ್ಳುವದು
05.05.2025 -17.05.2025
2ನೇ ಹಂತ
ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆಕೈಗೊಳ್ಳುವದು.
19.05.2025 – 21.05.2025
3ನೇ ಹಂತ
ಸ್ವಯಂಘೋಣೆ (ಆನಲೈನ್ ಮೂಲಕ)
19.05.2025 – 23.05.2025



















