ಮುಖ್ಯಮಂತ್ರಿಯವರ ಮೂಲಕಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.18.25 ಕೋಟಿ ಕಾಮಗಾರಿಗಳಿಗೆ ಅನುಮೋದನೆ
ವಿಜಯಪುರ: ಮುಖ್ಯಮಂತ್ರಿಯವರ ಮೂಲಕಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಗರಾಭಿವೃದ್ಧಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಅ.27 ರಂದು ಅನುಮೋದನೆ ನೀಡಿದ್ದಾರೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ವಾ.ನಂ.29ರ ವಜ್ರಹನುಮಾನ ಮುಖ್ಯ ರಸ್ತೆಯ ಗಡೇಕರ ಆಸ್ಪತ್ರೆಯಿಂದ ಆರ್.ಆರ್.ಯಡಹಳ್ಳಿ ಮನೆಯ ಮೂಲಕ ಪಿಡಿಜೆ ಲೇಔಟ್ ಮುಖ್ಯ ರಸ್ತೆ ಕೂಡುವ ರಸ್ತೆ ಡಾಂಬರೀಕರಣ ಹಾಗೂ ವಾ.ನಂ.23ರ ಪುಲಕೇಶಿ ನಗರದ ಮುಖ್ಯ ರಸ್ತೆಯಿಂದ ಜಗಜ್ಯೋತಿ ಬಸವೇಶ್ವರ ಕಾಲೇಜು ವರೆಗೆ ಹಾಗೂ ಆಂತರಿಕ ಸಿಸಿ ರಸ್ತೆ ಅಭಿವೃದ್ಧಿಗೆ ರೂ.2 ಕೋಟಿ, ವಾ.ನಂ.21ರ ಗುರುದೇವ ನಗರ ಪಶ್ಚಿಮ ಭಾಗ ಹಾಗೂ ಗುರುದೇವ ನಗರ ಪೂರ್ವ ಭಾಗದ ಆಂತರಿಕ ರಸ್ತೆಗಳ ಡಾಂಬರೀಕರಣ ರೂ.200 ಕೋಟಿ, ವಾ.ನಂ.21ರ ಸಾಯಿಪಾರ್ಕ್ ಮುಖ್ಯ ರಸ್ತೆಯಿಂದ ಗೋಕುಲ ಪಾರ್ಕ್ ಈಶ್ವರ ದೇವಸ್ಥಾನದ ಮೂಲಕ ಏಳು ಮಕ್ಕಳ ತಾಯಿ ಗುಡಿವರೆಗಿನ ಪ್ರಮುಖ ರಸ್ತೆ ಮತ್ತು ರೇಣುಕಾ ನಗರ ಆಂತರಿಕ ಸಿಸಿ ರಸ್ತೆ ನಿರ್ಮಾಣಕ್ಕೆ ರೂ.1.5 ಕೋಟಿ, ವಾ.ನಂ.22 ಜಿಲ್ಲಾ ಪಂಚಾಯಿತಿ ಮಹಾದ್ವಾರದಿಂದ ಜಿಲ್ಲಾ ಪಂಚಾಯಿತಿ ಕಚೇರಿ ವರೆಗೆ ಮಳೆ ನೀರು ಚರಂಡಿ, ಫುಟಪಾತ್, ಮಾದರಿ ಬೀದಿ ದೀಪ ಅಳವಡಿಕೆ ಮತ್ತು ವಾ.ನಂ.29ರ ನೆಹರು ನಗರದ ಬಜಂತ್ರಿ ಓಣಿಯ ಆಂತರಿಕ ಸಿಸಿ ರಸ್ತೆ ಅಭಿವೃದ್ಧಿಗೆ ರೂ.200 ಕೋಟಿ, ವಾ.ನಂ.22ರ ಕನಕದಾಸ ಬಡಾವಣೆಯ ದೇವರಾಜ ಅರಸು ಕಚೇರಿ ಹಿಂದಿನ ಭಾಗದ ರಸ್ತೆಯಿಂದ ಸಾಯಿ ಗ್ರ್ಯಾಂಡ್ ಹೋಟೆಲ್ ವರೆಗೆ ಸಿಸಿ ರಸ್ತೆ ಅಭಿವೃದ್ಧಿ ಮತ್ತು ವಾ.ನಂ.34 ಖಂಡಸಾರಿ ತಾಂಡಾದ ಮುಖ್ಯ ರಸ್ತೆಯ ಆಂತರಿಕ ಸಿಸಿ ರಸ್ತೆ ಅಭಿವೃದ್ಧಿ ರೂ.2 ಕೋಟಿ, ವಾ.ನಂ.9ರ ಸರಾಫ್ ಬಜಾರದ ಕಪಿಲ ಕಲೆಕ್ಷನ್ ದಿಂದ ರಾಮಮಂದಿರ ವರೆಗೆ ಡಕ್ಟ್, ಡ್ರೇನ್, ಪುಟಪಾತ್, ಮಾದರಿ ದೀಪ ಅಳವಡಿಕೆ, ಸಿಸಿ ರಸ್ತೆ ಅಭಿವೃದ್ಧಿಗೆ ರೂ.2 ಕೋಟಿ, ವಾ.ನಂ.9ರ ರಾಮಮಂದಿರದಿಂದ ಮಠಪತಿ ಗಲ್ಲಿ ಕ್ರಾಸ್ ವರೆಗೆ ಡಕ್ಟ್, ಡ್ರೇನ್, ಪುಟಪಾತ್, ಮಾದರಿ ದೀಪ ಅಳವಡಿಸಿ ಸಿಸಿ ರಸ್ತೆ ಅಭಿವೃದ್ಧಿಗೆ ರೂ.2 ಕೋಟಿ, ವಾ.ನಂ.22ರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಿಂದ ಹಲೋ ಕಿಡ್ಸ್ ಶಾಲೆ ವರೆಗೆ ಸಿಸಿ ರಸ್ತೆ ಅಭಿವೃದ್ಧಿ ರೂ.2 ಕೋಟಿ, ವಾ.ನಂ.22 ಹಲೋ ಕಿಡ್ಸ್ ಶಾಲೆಯಿಂದ ಡಿ.ದೇವರಾಜು ಅರಸು ವೃತ್ತದ ವರೆಗೆ ಸಿಸಿ ರಸ್ತೆ ಅಭಿವೃದ್ಧಿ ರೂ.1.25 ಕೋಟಿ, ವಾ.ನಂ.21 ಸಾಯಿಪಾರ್ಕ್ ಮುಖ್ಯ ರಸ್ತೆಯಿಂದ ಗುರುದೇವ ನಗರದ ಮೂಲಕ ಕೊಲ್ಹಾರ್ ರಸ್ತೆ ಕೂಡುವ ರಸ್ತೆ ಅಭಿವೃದ್ಧಿಗೆ ರೂ.1.5 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















