ವಿಜಯಪುರ : ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಚುನಾವಣೆಯ ಮತದಾರರಿಗೆ ಹಣ ಹಂಚಲು ಹೊರಟಿದ್ದ ವಾಹನ ವಿಜಯಪುರ ನಗರದ ಗೋದಾವರಿ ಬಾರ್ ಬಳಿ ಚುನಾವಣೆ ಅಧಿಕಾರಿಗಳಿಗೆ ಸಿಕ್ಕಿದೆ. ವಾಹನದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಹಣ ಹಂಚಿಕೆದಾರರು ಸಿಕ್ಕಿ ಬಿದ್ದಿದ್ದಾರೆ. ಒಟ್ಟು 1.70 ಲಕ್ಷ ರೂ.ಪತ್ತೆಯಾಗಿದ್ದು, ಒಂದೊಂದು ಪಾಕಿಟ್ ನಲ್ಲೂ10 ಸಾವಿರ ರೂ.ಸಿಕ್ಕಿದೆ. ಒಟ್ಟು 170 ಪಾಕೀಟ್ ಸಿಕ್ಕಿವೆ. ಆಮೂಲಕ ಕಾಂಗ್ರೆಸ್ ಒಂದು ಮತಕ್ಕೆ10 ಸಾವಿರ ರೂ. ಕೊಡುತ್ತಿರುವುದು ಬೆಳಕಿಗೆ ಬಂದಿದೆ.