“ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..
ಬೆಳಗಾವಿ : ಅಮೋಘ ಲೋಗಾಂವಿ ಅವರನ್ನು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮತಿಯ ವಿಜಯಪುರ ನಗರ ಅಧ್ಯಕ್ಷರನ್ನಾಗಿ, ರಾಜ್ಯಾಧ್ಯಕ್ಷ ಅಮಿತ್ ಎ ಕೆ ಹಾಗೂ ಪ್ರಧಾನ ಕಾರ್ಯದರ್ಶಿ ಶಂಕರ ಬಿ ಜ ಅವರು ನೇಮಕ ಮಾಡಿ ಆದೇಶ ಮಾಡಿದ್ದಾರೆ.
ವಿಜಯಪುರ ನಗರದ ಅಮೋಘ ಲೋಗಾಂವಿ ಅವರನ್ನು ಸಮಾಜದ ಹಿತ ದೃಷ್ಟಿಯಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮತ್ತು ಸಮಾಜದ ಜಾಗೃತಿಗಾಗಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತ ರಕ್ಷಣಾ ಸಮಿತಿಯ ವಿಜಯಪುರ ನಗರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅದಲ್ಲದೆ, ಶೋಷಿತ ನೊಂದಿತ ಧ್ವನಿಯಿಲ್ಲದೆ ಜನರಪರವಾಗಿ ಮತ್ತು ಸಂಜೀವಿನಿಯಾಗಿ ಕಾರ್ಯನಿರ್ವಹಿಸಲು ಇಚ್ಛಾಶಕ್ತಿ ವ್ಯಕ್ತಪಡಿಸಿರುವ ಉತ್ಸಾಹಿಗಳಿಗೆ ಅವಕಾಶ ಕೊಡುವುದು ನಮ್ಮ ಜವಬ್ದಾರಿ. ಅದರಂತೆ ತಾವು ಈ ನಾಡಿನ ವಿವಿಧ ಸಮುದಾಯಗಳ ಜೊತೆ ಶಾಂತಿ, ಸಹನೆ, ತಾಳ್ಮೆ, ವಿನಯ,ಶ್ರದ್ಧೆ ಭಯ ಭಕ್ತಿ ಹಾಗೂ ಧೈರ್ಯವಂತಿಕೆಯಿಂದ ಕಾರ್ಯನಿರ್ವಹಿಸಲು ಬೆಂಬಲಿಸಿ ಇಂದಿನಿಂದಲೆ ವಿಜಯಪುರ ನಗರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ತಮ್ಮಗೆ ಮುಕ್ತ ಅವಕಾಶ ನೀಡಿ ಈ ಆದೇಶ ಪ್ರಮಾಣ ಪತ್ರ ನೀಡಲಾಗುತ್ತಿದೆ.