ಬೆಂಗಳೂರು : ವಿಧಾನಸೌಧದಲ್ಲಿ ವಸತಿ ಸಚಿವರಾದ ವಿ ಸೋಮಣ್ಣ ಅವರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಅಫಜಲ್ಪುರ ತಾಲೂಕಿನ ಸ್ಥಿತಿಯ ಬಗ್ಗೆ ವಿವರಿಸಲಾಯತು. ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ, ತಮ್ಮ ಸರ್ಕಾರದಿಂದ ಬಡವರಿಗಾಗಿ ಕೊಡುತ್ತಿರುವ ಮನೆಗಳನ್ನು ವಾಮಮಾರ್ಗದ ಮೂಲಕ ಪಂಚಾಯತಿಯ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಸೇರಿಕೊಂಡು ಗ್ರಾಮಸಭೆಯನ್ನು ಮಾಡದೆ ತಮ್ಮ ತಮ್ಮ ಬೆಂಬಲಿಗರಿಗೆ ಮನೆ ನೀಡುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಎಷ್ಟೋ ಜನ ಇನ್ನು ನಮ್ಮ ತಾಲ್ಲೂಕಿನಲ್ಲಿ ಗುಡಿಸಲಲ್ಲೇ ವಾಸಮಾಡುತ್ತಿದ್ದಾರೆ.
ಇದರ ಬಗ್ಗೆ ತಾವು ಕಠಿಣ ಕ್ರಮಕೈಗೊಳ್ಳಬೇಕು. ಬಡವರಿಗೆ ಇರಲು ಒಂದು ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. ಸರ್ಕಾರದ ಸೌಲತ್ತುಗಳು ಶ್ರೀಮಂತರ ಕ್ಕಿಂತಲೂ ಬಡವರಿಗೆ ಹೇಗೆ ಮುಟ್ಟಿಸಬೇಕು ಎನ್ನುವ ಆಲೋಚನೆ ತಾವು ಮಾಡಬೇಕು ಎಂದು ಹೇಳಿದರು. ಇದಕ್ಕೆ ಸಚಿವರು, ಹೌದು ಇಂತಹ ಸನ್ನಿವೇಶಗಳು ರಾಜ್ಯದಲ್ಲಿ ನಡಿತಿದೆ. ನಾವು ಬಡವರಿಗೆ ಕೊಟ್ಟ ಮನೆಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಬಡತನಕ್ಕಿಂತ ಹಿಂದುಳಿದ ಜನರಿಗೆ ಮನೆಗಳು ಮುಟ್ಟಿಲ್ಲ ಅನ್ನುವ ವಿಚಾರ ನನಗೂ ಗೊತ್ತಿದೆ. ಇದರ ಬಗ್ಗೆ ನಾನು ಸೂಕ್ತವಾದ ನಿರ್ಣಯ ತೆಗೆದುಕೊಳ್ಳಲು ಯೋಚಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ವರದಿ : ಉಮೇಶ್ ಅಚಲೇರಿ
ವೈಸ್ ಆಫ್ ಜನತಾ ಕಲ್ಬುರ್ಗಿ.