ರಾಯಚೂರು: ಪೊಲೀಸ್ ಇಲಾಖೆಯ ನಿವೃತ್ತ ಎಎಸ್ಐ ಬಸವರಾಜಪ್ಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗನಿಂದಲೇ ತಂದೆ ಹತ್ಯೆಯಾಗಿದೆ. ನಗರದ ಗೋ ಶಾಲೆಯ ಹಿಂದುಗಡೆ ನಿನ್ನೆ ನಿವೃತ್ತ ಎಎಸ್ಐ ಬಸವರಾಜಪ್ಪನ ಮೃತದೇಹ ಸಿಕ್ಕಿತ್ತು. ದೇಹದ ತೆಲೆಗೆ ಬಲವಾದ ಪೆಟ್ಟು ಬಿದ್ದಿರುವುದ್ದರಿಂದ ಪೊಲೀಸ್ ರು ಅನುಮಾನಗೊಂಡು ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ನಿವೃತ್ತ ಎಎಸ್ಐ ಬಸವರಾಜಪ್ಪನ ಮಗ ಜಗದೀಶ್ ಸಿಮೆಂಟ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನುವುದು ಬಹಿರಂಗಗೊಂಡಿದೆ. ಮದುವೆ ವಿಚಾರವಾಗಿ ಹೆತ್ತ ತಂದೆಯನ್ನೆ ಮಗ ಕೊಲೆ ಮಾಡಿದ್ದಾನೆ ಎನ್ನುವುದು ಪ್ರಥಮ ಮಾಹಿತಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿಯನ್ನ ಪೊಲೀಸ್ರು ಆರೇಸ್ಟ್ ಮಾಡಿ, ಮೃತ ಹಿರಿಯ ಪುತ್ರ ಶಿವರಾಜ್ ದೂರಿನ ಮೇರಗೆ ಮಾರ್ಕಟ್ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.