ಯುವ ವಕೀಲನ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ಇಂಡಿ ವಕೀಲರು ಬುಧವಾರ ಪ್ರತಿಭಟನೆ ನಡೆಸಿದರು.
ಇಂಡಿ : ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ವಕೀಲರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ನ್ಯಾಯಾಲಯದ ಆವರಣದಿಂದ ಪ್ರತಿಭಟನೆ ಪ್ರಾರಂಭಿಸಿದ ಅವರು, ಹೃದಯ ಭಾಗದ ಬಸವೇಶ್ವರ ವೃತದಲ್ಲಿ ಸುಮಾರು 5 ನಿಮಿಷಗಳ ಕಾಲ ರಸ್ತೆ ತಡೆದು ಪೋಲಿಸರ ವಿರುದ್ಧ ಧಿಕ್ಕಾರ ಹೇಳಿ, ಆಕ್ರೋಶ ವ್ಯಕ್ತಪಡಿಸಿದರು.
ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಕಂದಾಯ ಇಲಾಖೆ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ಇಂಡಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಬಿ ಪಾಟೀಲ್ ಹಾಗೂ ಹಿರಿಯ ನ್ಯಾಯವಾದಿಗಳು ಸೇರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಯಾನಾಡಿದ ನ್ಯಾಯವಾದಿ ಸೋಮು ನಿಂಬರಗಿಮಠ ಹಾಗೂ ಜೆ.ಬಿ. ಬೇನೂರ,
ಇಡೀ ದೇಶದ ಕಾನೂನು ಸುವ್ಯವಸ್ಥಿತ ಕಾಪಾಡಿಕೊಂಡು ಹೋಗುವರಲ್ಲಿ ನ್ಯಾಯವಾದಿಗಳು ಮೊದಲು, ಅದಲ್ಲದೇ ದೇಶದ ಸ್ವತಂತ್ರಕ್ಕಾಗಿ ಹಾಗೂ ಸಂವಿಧಾನ ರಚಿಸಿದ ಕೀರ್ತಿ ನ್ಯಾಯವಾದಿ ಸಮುದಾಯಕ್ಕೆ ಸಲ್ಲುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಸಹ ನ್ಯಾಯವಾದಿಗಳು. ಅದಲ್ಲದೇ ದೇಶದ ಯಾವುದೇ ನಾಗರಿಕನಿಗೂ, ಯಾವುದೇ ಇಲಾಖೆ ಅಧಿಕಾರಿಗಳಿಗೂ ಅಥವಾ ಅದೇ ಪೋಲಿಸ್ ಇಲಾಖೆಯವರಿಗೂ ಅನ್ಯಾಯವಾದಾಗ, ನ್ಯಾಯ ಕೊಡುಸುವ ಪ್ರಮುಖ ಪಾತ್ರ ಸಹ ನ್ಯಾಯವಾದಿಗಳು ಮಾಡುತ್ತಾರೆ. ಆದರೆ ಚಿಕ್ಕಮಂಗಳೂರು ನ್ಯಾಯವಾದಿ ಪ್ರೀತಮ್ ಎನ್ ಟಿ ಹೆಲ್ಮೆಟ್ ಧರಸಿಲ್ಲ ಎಂಬ ಕಾರಣಕ್ಕೆ ಪೋಲಿಸರು ಅವರ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿ ಅಮಾನುಷ ನಡೆದುಕೊಂಡಿದ್ದು ಖಂಡನೀಯ ಎಂದು ಹೇಳಿದರು. ಈ ಕುರಿತು ಅಲ್ಲಿನ ನ್ಯಾಯವಾದಿಗಳು ಪ್ರತಿಭಟನೆಗೆ ಮುಂದಾದಾಗ ಅಲ್ಲಿನ ಪೋಲಿಸ್ ಇಲಾಖೆ ಅಧಿಕಾರಿಗಳು ಕಾರಣವಿಲ್ಲದೆ ಅನೇಕ ನ್ಯಾಯವಾದಿಗಳ ಮೇಲೆ ಮೂರು ಪ್ರಕರಣ ದಾಖಲಿಸುವ ಮೂಲಕ ಸಂವಿಧಾನ ವಿರೋಧಿ ನೀತಿ ಪ್ರದರ್ಶನ ಮಾಡಿದ್ದಾರೆ. ಇಂತಹ ಕೆಟ್ಟ ವಿಚಾರವುಳ್ಳ ಪೋಲಿಸರ ಮೇಲೆ ತುರ್ತು ಕಾನೂನು ಕ್ರಮ ಜರಗಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘದ ತಾಲೂಕು ಅಧ್ಯಕ್ಷ ಪಿ.ಬಿ ಪಾಟೀಲ್, ಕಾರ್ಯದರ್ಶಿ ಎಸ್ ಆರ್ ಬಿರಾದಾರ, ನ್ಯಾಯವಾದಿ ಸಿದ್ದರಾಮ ಬೂದಿಹಾಳ, ಎಮ್ ಸಿ ಬಿರಾದಾರ, ಎಸ್ ಎಲ್ ನಿಂಬರಗಿ ಮಠ, ಪಿ.ಜಿ ನಾಡಗೌಡ, ಜೆ ಕೆ ಕಾಂಬಳೆ, ಪಿ.ಎಮ್ ಮೂರಮನ, ನಾಡಪುರೋಹಿತ, ವಾಯ್ ಎಸ್ ಪೂಜಾರಿ, ಎ ಜಿ ಜೋಶಿ, ಎಮ್ ಎಸ್ ತೇಲಿ, ಬಿ ಕೆ ಮಸಳಿ, ಎ ಎಮ್ ಬಿರಾದಾರ, ಬಿ.ಬಿ ಬಿರಾದಾರ, ಎಸ್.ಆರ್ ಮುಜಗೊಂಡ, ಎಸ್ ಜಿ ವಾಲಿಕಾರ, ಎಸ್ ಬಳವಂತಿ, ಜಿ ವಿ ಪಾಟೀಲ್, ಎಸ್ ವಿ ಪಾಟೀಲ್, ಎಸ್ ಎಸ್ ಪಾಟೀಲ್, ಎಮ್ ಪಿ ಕುಲಕರ್ಣಿ, ಸಿ ಎಸ್ ನಾಡಗೌಡ, ಜೆ ಬಿ ಬೇನೂರ, ಅಶೋಕ ದೊತ್ರೆ, ಜೆ. ಬಿ ಬಾಗವಾನ, ಯಲ್ಲಪ್ಪ ಜಮಾದಾರ, ವಾಯ್ ಎಸ್ ಪೂಜಾರಿ ಉಪಸ್ಥಿತರಿದ್ದರು.