ವಿಜಯಪುರ : ರಸ್ತೆ ದಾಟುವ ವೇಳೆಯಲ್ಲಿ ಕುರಿಗಳ ಮೇಲೆ ಕಾರ್ ಹಾಯ್ದು ಹೋಗಿರುವ ಪರಿಣಾಮ 10 ಕುರಿಗಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸವನಬಾಗೇಬಾಡಿ ಕ್ರಾಸ್ ಬಳಿ ನಡೆದಿದೆ. ಬೇನಾಳ ಗ್ರಾಮದ ಕುರಿಗಾಯಿ ಅಶೋಕ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದಾವೆ. ಅಲ್ಲದೇ, ಘಟನೆ ಬಳಿಕ ಕಾರ್ ಚಾಲಕ ಕಾರ್ ಸಮೇತ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.