ವಿಜಯಪುರ : ಭ್ರಷ್ಟಾಚಾರದ ವಿರುದ್ದ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ವಿಜಯಪುರ ನಗರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೇಸ್ ವರ್ಕರ್ ಕಿರಣಕುಮಾರ ಡಂಗೆ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಹೋಟೆಲ್ ಪರವಾನಿಗೆ ಯನ್ನು ನವೀಕರಿಸಲು 2 ಸಾವಿರ ಬೇಡಿಕೆ ಇರಿಸಿದ್ದ ಕಿರಣಕುಮಾರ. ಆ ಮೊತ್ತ ಸ್ವೀಕರಿಸುವಾಗಿ ಸಾಕ್ಷ ಸಮೇತ ಸಿಕ್ಕಿ ಬಿದ್ದಿದ್ದಾನೆ. ಬಂಧಿತ ಕಿರಣಕುಮಾರ ಹೊರಗುತ್ತಿಗೆ ನೌಕರನಾಗಿದ್ದಾನೆ. ಎಸ್ ಪಿ ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಮಂಜುನಾಥ ಗಂಗಲ್ಲ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಪರಮೇಶ್ವರ ಜಿ.ಕವಟಗಿ ದಾಳಿಗೈದಿದ್ದಾರೆ. ವಿಜಯಪುರ ಎಸಿಬಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.