ಕಾಡಾನೆ ದಾಳಿಗೆ ಯುವಕ ಬಲಿ..!
ಹನೂರು :ತಾಲೂಕಿನ ಕತ್ತೆ ಕಾಲ್ ಪೋಡು ಗ್ರಾಮದ ಜಡೆಯ ಎಂಬುವರ ಪುತ್ರ ಮಾದ(23) ಆನೆ ದಾಳಿಗೆ ಸ್ಥಳದಲ್ಲಿಯೇ ಇರುತ್ತಾನೆ.
ಬುಧವಾರ ರಾತ್ರಿ ಕಾರ್ಯನಿಮಿತ್ತ ಹಿರಿಯಂಬಲ ಗ್ರಾಮಕ್ಕೆ ತೆರಳಿ ಕತ್ತೆ ಕಾಲ್ ಪೋಡು ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ, ಯುವಕ ಕಾಡಾನೆ ದಾಳಿ ನಡೆಸಿದ ವಿಚಾರವನ್ನು ಸ್ಥಳೀಯರು ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ತಕ್ಷಣ ಅರಣ್ಯ ಅಧಿಕಾರಿ ಪ್ರಮೋದ್ ಬೈಲೂರು ವಲಯ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ವ್ಯಕ್ತಿಯನ್ನು ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದರು.