ಮುದ್ದೇಬಿಹಾಳ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಅಪ್ರತಿಮ ಪ್ರೌಢಿಮೆ ಇರುತ್ತದೆ ಅವರನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕೈಗಳು ಬೇಕೆಂದು ಕೋಳೂರ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ರುದ್ರೇಶ ಕಿತ್ತೂರ ಹೇಳಿದರು.
ತಾಲ್ಲೂಕಿನ ಕೋಳೂರ ಗ್ರಾಮದ ಶ್ರೀ ಕೃಷ್ಣದೇವರಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸರಕಾರಿ ಶಾಲೆಯ ವಿದ್ಯಾರ್ಥಿಗಳು ಓದಿನಲ್ಲಿ ಮಾತ್ರವಲ್ಲದೆ ಸಂಸ್ಕಾರವಂತರು ಆಗಿದ್ದಾರೆ ಶ್ರೀ ಕೃಷ್ಣದೇವರಾಯ ಚಾರಿಟೇಬಲ್ ಟ್ರಸ್ಟ್ಗ್ರಾ ಮದಲ್ಲಿ ಉತ್ತಮ ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕೃಷ್ಣದೇವರಾಯ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು, ಪುರೋಹಿತರಾದ ವೇ.ಶ್ರೀ ಸಂತೋಷ ಸ್ವಾಮೀಜಿ ಹಿರೇಮಠ ಗುರುಗಳು ಮಾತನಾಡಿ ನಮ್ಮ ಟ್ರಸ್ಟ ಧಾರ್ಮಿಕವಲ್ಲದೇ, ಸಮಾಜಮುಖಿ ಪರಿಸರ ಮಿತ್ರ ಹಾಗೂ ಶೈಕ್ಷಣಿಕ ಪ್ರೋತ್ಸಾಹ ಗ್ರಾಮವನ್ನು ಸ್ವಚ್ಚತೆ ಮಾಡುತ್ತಾ ಟ್ರಸ್ಟ್ ಸ್ಪಾಪನೆಯಾಗಿ 3ವರ್ಷಗಳನ್ನು ಪೂರೈಸಿದೆ ಇದರ ಅಡಿಯಲ್ಲಿ ಈಗಾಗಲೆ 18 ವಿವಿಧ ಯೋಜನೆಯ ಕಾರ್ಯಕ್ರಮವನ್ನು ಊರಿನ ಗುರು-ಹಿರಿಯರು, ಯುವಕರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕಾರ್ಯಕ್ರಮಗಳೆಲ್ಲಾ ಯಶಸ್ವಿಯಾಗಿವೆ ಎಂದು ಗುರುಗಳು ಹೇಳಿದರು.
ಹತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಕುಮಾರಿ ರೂಪಾ ಶೇಕಪ್ಪ ಹಡಲಗೇರಿ, ಐಶ್ವರ್ಯ ವಿಜಯಕುಮಾರ ಗೋನಾಳ, ಸೌಜನ್ಯ ಸಂಗಣ್ಣ ಕತ್ತಿ, ಪ್ರಜ್ವಲ ಕುಂಬಾರ , ಪ್ರಜ್ವಲ್ ಕತ್ತಿ, ಸಂಪತ್ ಢವಳಗಿ ವಿದ್ಯಾರ್ಥಿಗಳಿಗೆ ಟ್ರಸ್ಟನಿಂದ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ ಸದಸ್ಯರು L.I.C ಅಭಿವೃಧಿ ಅಧಿಕಾರಿ ಚಂದ್ರಶೇಖರ ತುಂಬಗಿ, S.D.M.C ಅದ್ಯಕ್ಷೆ ಕಸ್ತೂರಿಬಾಯಿ ಪಾಟೀಲ, ಕರ್ನಾಟಕ ಬ್ಯಾಂಕ ಉಪಾಧ್ಯಕ್ಷ, ಸಮಾಜ ಸೇವಕ ಗುರುಲಿಂಗಪ್ಪಗೌಡ ಪಾಟೀಲ, ಶಿಕ್ಷಕಿ ನೀಲಮ್ಮ ಢವಳಗಿ, ಮಾಜಿ ಸೈನಿಕರು ಸಂಗಪ್ಪ ಕತ್ತಿ, ಆದರ್ಶ ರೈತರಾದ ಅಯ್ಯಪ್ಪ ಬಿದರಕುಂದಿ, ವಿರೇಶ ಢವಳಗಿ ಶಿಕ್ಷಕರು, ಅಂಚೆ ಇಲಾಖೆ,ವಿಜಯಕುಮಾರ್ ಗೋನಾಳ ಊರಿನ ಹಿರಿಯರಾದ ರಾಮನಗೌಡ ಪಾಟೀಲ, ಲಕ್ಷಣ ಡವಳಗಿ, ಸಂಗಪ್ಪ ನೀ ಢವಳಗಿ , ಈಸಪ್ಪ ಢವಳಗಿ, ಚನ್ನಪ್ಪ ಢವಳಗಿ , ಸಂಗಣ್ಣ ಕತ್ತಿ ಸೇರಿದಂತೆ ಪ್ರೌಢ ಶಾಲೆಯ ಶಿಕ್ಷಕರು, ಪಾಲಕರು ವಿದ್ಯಾರ್ಥಿಗಳು ಸೇರಿದಂತೆ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಯ್ಯಪ್ಪ ಬಿದರಕುಂದಿ ನಿರೂಪಣೆ ಮಾಡಿ ವಂದಿಸಿದರು.