ತಾಲೂಕು ಪಂಚಾಯತ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನಡುವ ಮೂಲಕ ಚಾಲನೆ: ತಾಪಂ ಇಓ ಮಸಳಿ
ತಾಲೂಕು ಪಂಚಾಯತಿ ಆವರಣದಲ್ಲಿ ಸ್ವಚ್ಛತ ಶ್ರಮದಾನಕ್ಕೆ ಅಭಿಯಾನ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಸ್ವಚ್ಛ ಶನಿವಾರ ಅಂಗವಾಗಿ ಸ್ವಚ್ಛತ ಶ್ರಮದಾನ ಮಾಡಲಾಯಿತು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್.ಮಸಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಪ್ರತಿ ವಾರದ ಶನಿವಾರದಂದು ತಾಲೂಕು ಕಚೇರಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ಶನಿವಾರ ಹಮ್ಮಿಕೊಂಡು ಸ್ವಚ್ಛಗೊಳಿಸಲಾಗುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.
ಈ ವೇಳೆ ತಾಲೂಕು ಪಂಚಾಯತ ಯೋಜನಾಧಿಕಾರಿ ಖುಬಾಸಿಂಗ್ ಜಾಧವ್, ಸಹಾಯಕ ನಿರ್ದೇಶಕ ಪಿ.ಎಸ್.ಕಸನಕ್ಕಿ (ಗ್ರಾ.ಉ.), ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಎಂ.ಎಂ.ಬೆಳಗಲ್ ಹಾಗೂ ತಾಲೂಕು ಪಂಚಾಯತ ಅಧಿಕಾರಿ, ಸಿಬ್ಬಂದಿಗಳಾದ ಆನಂದ ಬಿರಾದಾರ, ವಿ ಎನ್ ನಾಗರಾಳಮಠ,ಬಾಬು ಪೋತೆಗೊಳ್, ಸುವರ್ಣ ಡಂಬಳ, ಬಸವರಾಜ ಹೊಸಮನಿ, ಪಾವಡೆಪ್ಪ ಮಾದರ, ಶೋಭಾ ಉಕ್ಕಲಿ, ಶಂಕರಗೌಡ ಯಾಳವಾರ,ಮಲ್ಲಿಕಾರ್ಜುನ ಬಿಜಾಪುರ, ಪವನ್ ಜೋಶಿ,ಎನ್ ಅರ್ ಎಲ್ ಎಂ ಸಿಬ್ಬಂದಿಗಳು, ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.