ಮಸ್ಕಿ :ಸೇವಾಭದ್ರತೆ ಕೊಡಿ ಇಲ್ಲವೆ ವಿಷಕೊಡಿ ಎಂದು ಮಸ್ಕಿಯ ಹಿರಿಯ ಅತಿಥಿ ಉಪನ್ಯಾಸಕ ರಾಮಣ್ಣ ನಾಯಕರವರು ಸರಕಾರಕ್ಕೆ ಆಗ್ರಹಿಸಿದರು. ಇಂದು ಮದ್ಯಾಹ್ನ ಮಸ್ಕಿಯ ನಿರೀಕ್ಷಣ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಳೆ ಸಂಜೆ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಹಾಗೂ ವಿಧಾನ ಪರಿಷತ್ ಸದಸ್ಯರು ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ನಮ್ಮ 14,500. ಅತಿಥಿ ಉಪನ್ಯಾಸಕರ ಬದುಕಿಗೆ ಭದ್ರತೆ ಒದಗಿಸಬೇಕೆಂದು ಹೇಳಿದರು. ಈ ವೇಳೆ ಪ್ರಭುದೇವ ಸಾಲಿಮಠ, ಅಯ್ಯಪ್ಪ ಪಾಮನಕಲ್ಲೂರು, ಚನ್ನಬಸಪ್ಪ ವಸ್ತ್ರದ್, ರಾಮಪ್ರಸಾದ ಚಿಗರಿ, ಚಿದಾನಂದ ಎಲಿಗಾರ್, ಸುರೇಶ ಬಳಗಾನೂರು ಉಪಸ್ಥಿತರಿದ್ದರು.



















