ಗ್ರಾಮೀಣ ಪ್ರದೇಶದಲ್ಲಿ ಯುವಜನತೆ ವಲಸೆ ಹೋಗುವುದನ್ನು ತಪ್ಪಿಸಿಬೇಕು..!
ಇಂಡಿ :ಇಂದಿನ ದಿನಮಾನಗಳಲ್ಲಿ ವೃತ್ತಿ ಪ್ರವೃತ್ತಿಯು ಮಾದರಿ ಸ್ವವಾಲಂಬಿ ಸ್ವ- ಉದ್ಯೋಗದ ಮೇಲೆ ಅವಲಂಬಿತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಯುವಜನತೆ ವಲಸೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿ ಸೌರಶಕ್ತಿ ಆಧಾರಿತ ಜೀವನೋಪಾಯಕ್ಕೆ ಮುಂದಾಗಬೇಕಾಗಿದೆ ಎಂದು ಜೀವನೋಪಾಯ ತರಬೇತಿ ವಿಭಾಗದ ವ್ಯವಸ್ಥಾಪಕರು ಶಿವಕುಮಾರ್ ಕೆ ಮಾತನಾಡಿದರು.
ತಾಲ್ಲೂಕಿನ ಆಳೂರ ಗ್ರಾಮದಲ್ಲಿ ಮಣಿಪಾಲ ಪೇಮೆಂಟ್ ಮತ್ತು ಐಡೆಂಟಿಟಿ ಸೆಲ್ಯೂಷನ್ ಲಿಮಿಟೆಡ್ ಪ್ರಯೋಜಿಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ದೀಪಾಲಯ ಸಂಸ್ಥೆ, ಸೆಲ್ಕೋ ಸೋಲಾರ್ ಲೈಟ್ ರ ಸಹಯೋಗದಲ್ಲಿ “ವಿಕೇಂದ್ರೀಕೃತ ನವೀಕರಿಸಬಹುದಾದ ಶಕ್ತಿ, ಕೌಶಲ್ಯಧಾರಿತ ತರಬೇತಿ ಮತ್ತು ಸೌರಶಕ್ತಿಯದಾರಿತ ಜೀವನೋಪಾಯಕ್ಕೆ ಅನುಕೂಲವಾಗುವ ಉಪಕರಣಗಳು ಸ್ವ ಉದ್ಯೋಗ ಸೌರ ತಂತ್ರಜ್ಞಾನದ ಅನುಷ್ಠಾನ ಮತ್ತು ಆವಿಷ್ಕಾರ” ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸೌರಶಕ್ತಿ ಆಧಾರಿತ ಜೀವನೋಪಾಯಕ್ಕೆ ಅನುಕೂಲವಾಗುವ ಉಪಕರಣಗಳನ್ನು ಬಳಸಿ ಆಹಾರ ಉತ್ಪನ್ನಗಳು ಚಿಪ್ಸ್ ತಯಾರಿಕೆ, ರೊಟ್ಟಿ ತಯಾರಿಕೆ, ಚಕ್ಕುಲಿ ಶಾವಿಗೆ ತಯಾರಿಸುವ ಯಂತ್ರ , ಕಾರ ಕುಟ್ಟುವ, ಕಬ್ಬಿನ ಜ್ಯೂಸ್ ತಯಾರಿಸುವ ಯಂತ್ರ, ಜೆರಾಕ್ಸ್ ಯಂತ್ರ, ಬಟ್ಟೆ ಹೋಲಿಯುವ ರಾಟೆ ಯಂತ್ರಕ್ಕೆ ಇತರೆ ಉದ್ಯಮಗಳನ್ನು ಆಯ್ಕೆ ಮಾಡಿ ಜೀವನ ನಿರ್ವಹಣೆಯನ್ನು ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ವಿಭಾಗದಿಂದ ಈರೇಶ್ ಡಂಗಿ ಮಾತನಾಡಿ ಪ್ರತಿಯೊಬ್ಬರಿಗೆ ಆರ್ಥಿಕ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಿ ಸೈಬರ್ ವಂಚನೆ ಹಾಗೂ ಬ್ಯಾಂಕಿನಲ್ಲಿರುವ ವಿಶೇಷ ಇನ್ಸೂರೆನ್ಸ್ ಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇನ್ನೂ ಭರತೇಶ್ ಉಪಾಧ್ಯ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಣಕಾಸಿನ ವ್ಯವಹಾರ ಮಾಡಿ ಬ್ಯಾಂಕಿನಲ್ಲಿ ಸಿಗುವ ಯೋಜನೆಗಳನ್ನು ಅಳವಡಿಕೆ ಮಾಡಿಕೊಂಡು ಸ್ವ ಉದ್ಯೋಗ ಮಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಸ್ಕೀಮ್ ಗಳನ್ನು ಅಳವಡಿಕೆ ಮಾಡಿ ಉದ್ಯೋಗ ಮಾಡಲು ಕರೆ ನೀಡಿದರು.
ಪಿಂಟೋ ಸಂಯೋಜಕರು ದೀಪಾಲಯ ಸಂಸ್ಥೆಯ ಸಿಸ್ಟರ್ ಹೀಲಾರಿಯ ಮಾತನಾಡಿದ ಅವರು, ಬದುಕು ಹಾಸನಾಗಬೇಕಾದರೆ ಉದ್ಯೋಗ ಮಾಡಿ ಮಹಿಳೆಯರು ಸಬಲೀಕರಣರಾಗಿ ಸೌರ ತಂತ್ರಜ್ಞಾನ ಬಳಕೆಮಾಡಬೇಕು ಈಗಾಗಲೇ ದೀಪಾಲಯ ಸಂಸ್ಥೆಯು ಇಂಡಿ ಭಾಗದ ಸಮಸ್ತ ಜನತೆಗೆ ಆರ್ಥಿಕವಾಗಿ,ಸಮಾಜಿಕವಾಗಿ, ಶೈಕ್ಷಣಿಕವಾಗಿ ಸೇವೆ ಸಲ್ಲಿಸುತಿದೆ ಎಂದು ಕರೆನೀಡಿದರು.
ಇನ್ನೂ ಈ ಸಂದರ್ಭದಲ್ಲಿ ದೀಪಾಲಯ ಕಾರ್ಯಕರ್ತರು ಹಾಗೂ ನರೇಗಾ ಕೆಲಸಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ತರಬೇತಿ ಕಾರ್ಯಾಗಾರವು ಯಶಸ್ವಿಯಾಗಿ ಪೂರ್ಣಗೊಂಡಿತು.