ಪತ್ರಿಕಾ ಸಮ್ಮೇಳನದಲ್ಲಿ ವೈ ಎಮ್ ಪೂಜಾರಗೆ ಸನ್ಮಾನ
ಸಂತೋಷ ಹೆಗಡೆ, ನಿವೃತ್ತ ಲೋಕಾಯುಕ್ತ- ನ್ಯಾಯಾಧೀಶರಿಂದ ವೈ ಎಂ ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ಸನ್ಮಾನ
ಇಂಡಿ : ಆರೋಗ್ಯ ಇಲಾಖೆಯಲ್ಲಿ ಅನನ್ಯ ಸೇವೆ ಕಂಡು ಇಲಾಖೆ ಶಿಕ್ಷಣ ಅಧಿಕಾರಿ ವೈ ಎಮ್ ಪೂಜಾರಗೆ ನಿವೃತ್ತ್ ಲೋಕಾಯುಕ್ತ, ನ್ಯಾಯಾಧೀಶ ಸಂತೋಷ ಹೆಗಡೆ ಹಾಗೂ ಪತ್ರಕರ್ತರ ಧ್ವನಿ ಸಂಘದಿಂದ ಸನ್ಮಾನಿಸಲಾಯಿತು.
ಕಲ್ಬುರ್ಗಿ ಜಿಲ್ಲೆಯ ಪತ್ರಿಕಾ ಮಾಧ್ಯಮ ಸಹಯೋಗದಲ್ಲಿ ನಡೆದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಿಕ್ಕ ಬೇವನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಗಣನೀಯ ಸಲ್ಲಿಸುತ್ತೀರುವ ವೈ ಎಮ್ ಪೂಜಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯಲ್ಲಿ ಅತೀ ಹೆಚ್ಚು ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಕಣ್ಣು ತಪಾಸಣೆಯ ಶಿಬಿರ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಗ್ರಾಮೀಣದಲ್ಲಿ ನಡೆಸಿಕೊಟ್ಟಿದ್ದಾರೆ. ಅದಲ್ಲದೇ ಗ್ರಾಮೀಣ ಭಾಗದಲ್ಲಿ ಕಳೆದ 2 ವರ್ಷದಲ್ಲಿ 4 ಸಾವಿರ ರಕ್ತದಾನಿಗಳ ಮನವೋಲಿಸಿ, ಸುಮಾರು 4 ಸಾವಿರಕ್ಕಿಂತಲೂ ಹೆಚ್ಚು ರಕ್ತದ ಯುನಿಟ್ ಸಂಗ್ರಹ. 8 ನೂರಕ್ಕೂ ಹೆಚ್ಚು ಕಣ್ಣು ಪೊರೆ ಉಚಿತ ಅಪರೆಷನ್ ಮಾಡಿಸಿ ಅಂದರ್ ಕಣ್ಣಿಗೆ ಬೆಳಕಾಗುವ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಆದ್ದರಿಂದ ಕಲ್ಬುರ್ಗಿ ಪತ್ರಕರ್ತರ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಆ ಕಾರಣದಿಂದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿ ವರ್ಗದವರು, ಸಂಘ, ಸಂಸ್ಥೆಯ ಮುಖಂಡರು , ಗಣ್ಯರು ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ತಿಳಿಸಿದ್ದಾರೆ.