ಖ್ಯಾತ್ ನಟಿ ಜಯಪ್ರದಾಗೆ ಜೈಲು ಶಿಕ್ಷೆ..!
ಚೆನೈ : ಚಿತ್ರಮಂದಿರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಇಎಸ್ ಇ ಹಣ ಪಾವತಿಸಿಲ್ಲ ಎಂದು ರಾಜ್ಯ ಕಾರ್ಮಿಕರು ರಾಜ್ಯ ವಿಮಾ ನಿಗಮಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚೆನೈನ ಎಗ್ಮೋರ್ ನ್ಯಾಯಾಲಯ ಖ್ಯಾತ ನಟಿ ಮಾಜಿ ಸಂಸದೆ ಜಯಪ್ರದಾ ಅವರಿಗೆ ೬ ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಜಯಪ್ರದ ಅವರೆ ನಡೆಸುತ್ತಿದ್ದ ಚಿತ್ರ ಮಂದಿರದಲ್ಲಿ ಕಾರ್ಮಿಕರಿಗೆ ಇಎಸೈ ಹಣ ನೀಡಿಲ್ಲ ಎಂಬ ದೂರು ಸಲ್ಲಿಸಿದ್ದರಿಂದ ಎಗ್ಮೋರ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.