VOJ ನ್ಯೂಸ್ ಡೆಸ್ಕ್: ಕಬ್ಬಿಣದ ಮೊಳೆಗಳ ಮೇಲೆ ನಾಟ್ಯಮಾಡಿ ನೃತ್ಯಗಾರ್ತಿ ಮಹಿಳೆಯೊಬ್ಬರು ವಿಶ್ವ ದಾಖಲೆ ಬರೆದಿದ್ದಾರೆ.
ಆಂಧ್ರಪ್ರದೇಶದ ಜನಪ್ರಿಯ ನೃತ್ಯವಾದ ಕುಚಿಪುಡಿ ನೃತ್ಯ ಮಾಡುವ ಮೂಲಕ ಮಹಿಳೆ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಕಬ್ಬಿಣದ ಮೊಳೆಯ ಮೇಲೆ ನೃತ್ಯ ಮಾಡಿ ತೋರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ವಿಶಾಖಪಟ್ಟಣಂನ ಲಿಖಿತಾ 9 ನಿಮಿಷಗಳ ದುರ್ಗಾ ಸ್ತುತಿಗೆ ಕಬ್ಬಿಣದ ಮೊಳೆಯ ಸ್ಟ್ಯಾಂಡ್ ಮೇಲೆ ನಿಂತು ನೃತ್ಯ ಮಾಡಿದ್ದಾರೆ. ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಲಿಖಿತಾ, ನಾನು ವಿಶ್ವ ದಾಖಲೆ ನಿರ್ಮಿಸಬೇಕೆಂದು ಮೊದಲಿನಿಂದಲೂ ಕನಸು ಕಂಡಿದ್ದೆ. ಮೊಳೆಗಳಿರುವ ಸ್ಟ್ಯಾಂಡ್ಗಳ ಮೇಲೆ ನೃತ್ಯ ಮಾಡುವುದನ್ನು ನಿತ್ಯ ಪ್ರ್ಯಾಕ್ಟೀಸ್ ಮಾಡುತ್ತಿದೆ. ಸಾಧಿಸಬೇಕೆನ್ನುವ ಛಲ ಅಚಲವಾಗಿತ್ತು. ಸಾಕಷ್ಟು ನೋವು, ಗಾಯಗಳಾದರೂ ನನ್ನ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇನೆ ಎಂದಿದ್ದಾರೆ.