ಇಂಡಿ : ತಾಲೂಕಿನ ತಾಂಬಾ ಪಟ್ಟಣದಲ್ಲಿ ಗುತ್ತಿಬಸವಣ್ಣ ಹೋರಾಟ ಸಮಿತಿ ವತಿಯಿಂದ ಅರೇಬೆತ್ತಲೆ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನಾ ಜಾತಾವು ಪೂಜ್ಯರ ನೇತೃತ್ವದಲ್ಲಿ ಹಾಗೂ ಹೋರಾಟ ಸಮಿತಿ ಮುಖ್ಯಸ್ಥರಾದ ಮಲ್ಲಯ್ಯ ಸಾರಂಗಮಠ ಮುಂದಾಳತ್ವದಲ್ಲಿ ತಾಂಬಾದ ಪ್ರಮುಖ ಬೀದಿಗಳಲ್ಲಿ ಸಾಗಿ ವೇದಿಕೆಯಲ್ಲಿ ಅಂತ್ಯಗೊಂಡಿತು.
ಜಾತಾದಲ್ಲಿ ಹೋರಾಟ ಸಮಿತಿ ಸದಸ್ಯ ಹಾಗೂ ಕರವೇ ಅಧ್ಯಕ್ಷ ಶಿವರಾಜ ಕೆಂಗನಾಳ, ಸಿದ್ದಪ್ಪ ಬೂದಿಹಾಳ, ಈರಣ್ಣ ಬ್ಯಾಕೋಡ, ಸಿದ್ದಪ್ಪ ಕಿಣಗಿ, ಚಂದ್ರಮ ಮೂಲಿಮನಿ, ಶ್ರೀಮಂತ ನಿಂಗಮನಿ, ಪ್ರಕಾಶ್ ಮುಂಜಿ, ಧರೆಪ್ಪ ಕೆಂಗನಾಳ, ರಮೇಶ ಚಂದಕವಟೆ, ಶೇಕಪ್ಪ ರೋಟ್ಟಿ, ಇನ್ನೂ ಅನೇಕ ರೈತ ಮುಖಂಡರು, ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದರು.