ಒಲೆರಹಿತ ಅಡುಗೆಯಿಂದ ಜೀವಸತ್ವ ಹಿತಕರ
ಇಂಡಿ : ಕೆಲವು ಪಾದಾರ್ಥಗಳನ್ನು ಒಲೆಯ ಮೇಲೆ ಬೇಯಿಸಿ ಮಾಡಿದರೆ ಹಿತಕರ ಇನ್ನೂ ಕೆಲವು ಬೇಯಿಸದೇ ಮಾಡಿದರೆ ಹಿತಕರ. ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೀವಸತ್ವ ಪಡೆಯಬಹುದು ಎಂದು ಹಿರಿಯ ವಿಜ್ಞಾನಿ ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಆಶ್ರಯದಲ್ಲಿ ಆಯೋಜಿಸಲಾದ ಕೃಷಿ ಮೇಳದ ಭಾಗವಾಗಿ, ಒಲೆರಹಿತ ಅಡುಗೆ, ಕಸೂತಿ ಮತ್ತು ರಂಗೋಲಿ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ವೇದಿಕೆಗಳು ಸೃಜನಶೀಲತೆ ಮತ್ತು ಅವಿಷ್ಕಾರವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ತೀರ್ಪುಗಾರರಾಗಿ ವಿಜಯಪುರ, ಡಾ. ಅರುಣ್ ಕುಮಾರ್ ಸತ್‌ರಡ್ಡಿ, ಪ್ರಾಥಮಿಕ ಶಾಲೆ, ಇಂಡಿ ಶ್ರೀಮತಿ ಭಗವಂತ ಗೌಡ, ಚಿತ್ರಕಲಾ ಶಿಕ್ಷಕರು, ಕಿತ್ತೂರಾಣ ಚೆನ್ನಮ್ಮ ವಸತಿ ಶಾಲೆ, ಅಂಜುಟಗಿಯ ಶಿವಾನಂದ ಜೇವೂರ್ ತೀರ್ಪು ನಿರ್ಣಯಿಸಿದರು. ಗೃಹ ವಿಜ್ಞಾನಿ ಡಾ. ವೀಣಾ ಚಂದಾವರಿ, ಡಾ. ಪ್ರೇಮ್‌ಚಂದ್, ಡಾ. ಬಾಲಾಜಿ ನಾಯಕ್,್ತ ಮಜೀದ ಜಿ. ಮತ್ತು ಶ್ರೀಮತಿ ಮಂಜುಳಾ ಹೊಸಮನಿ ಒಳಗೊಂಡ ಕಾರ್ಯಕ್ರಮ ಸಂಘಟಿಸಿದರು.
ಒಲೆರಹಿತ ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಡಾ. ಪಲ್ಲವಿ ಹಿರೇಪಟ್, ಸಾಲೋಟಗಿ ದ್ವಿತೀಯ ಸಂಗೀತಾ ಹಿರೇಪಟ್, ಸಾಲೋಟಗಿ ತೃತೀಯ ಭಾರತಿ ಪಾಟೀಲ್, ಇಂಡಿ ಮತ್ತು ಕಸೂತಿ ಸ್ಪರ್ಧೆಯಲ್ಲಿ ಪ್ರಥಮ ಕಮಲಾಬಾಯಿ ಚವಾಣ್ ಮತ್ತು ಮಂಜುಳಾವತಿ ಸಾಲೋಟಗಿ ದ್ವಿತೀಯ ಅನ್ಸಾಬಾಯಿ ಗಜಾನನ ರಾಥೋಡ್ ಮತ್ತು ಸಂಗೀತಾ ಚಿಕ್‌ಪಟ ಸಾಲೋಟಗಿ ತೃತೀಯ ಶಾಂತಾಬಾಯಿ ಜಾದವ್ ಮತ್ತು ವಿಜಯಲಕ್ಷ್ಮಿ ಬೋಳೇಗಾಲ, ಸ್ಟೇಷನ್ ರಸ್ತೆ ಇಂಡಿ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸಂಗೀತಾ ಚಿಕಪಟ್ ಸಾಲೋಟಗಿ ದ್ವಿತೀಯ ಡಾ. ಪಲ್ಲವಿ ಚಿಕಪಟ, ತೃತೀಯ ಪೈಜಾ, ಕೆ.ಇ.ಬಿ ಸರಕಾರಿ ಶಾಲೆ, ಇಂಡಿ ಬಹುಮಾನ ಪಡೆದರು.
ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಒಲೆರಹಿತ ಅಡುಗೆ, ಕಸೂತಿ ಮತ್ತು ರಂಗೋಲಿ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳೆಯರು