ಶಿಕ್ಷಣದಿಂದ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ..!
ಇಂಡಿ : ತಾಲೂಕಿನ ತಾಂಬಾ ಗ್ರಾಮದ ಮೂಲ ಸೌಲಭ್ಯವನ್ನು ಒದಗಿಸವುದೇ ನನ್ನ ಆದ್ಯ ಕರ್ತವ್ಯ, ಹಾಗೂ ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅವಶ್ಯಕ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ರಜಾಕ ಚಿಕ್ಕಗಸಿ ಹೇಳಿದರು.
ಅವರು ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಕಾಂಪೌಡ ಕಟ್ಟಡದ ನಿರ್ಮಾಣದ ಭೂಮಿ ಪೂಜಾ ಸಮಾರಂಭ ನೆರವೇರಿಸಿ ಮಾತನಾಡಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು ರೂ ೧೨ ಲಕ್ಷ ಅನೂದಾನದಲ್ಲಿ ನಿರ್ಮಾಣದ ಕಾಮಗಾರಿ ಆರಂಭವಾಗುತ್ತಿದೆ. ೩೯ ಜನ ಗ್ರಾಮ ಪಂಚಾಯತ್ ಸದಸ್ಯರು ಒಂದುಗೂಡಿ ನನ್ನನ್ನು ಆ ವಿರೋಧವಾಗಿ ಆಯ್ಕೆ ಮಾಡಿದ್ದಾರೆ ನನ್ನ ಮೇಲೆ ಇಷ್ಟೊಂದು ಪ್ರೀತಿ, ಗೌರವ ನೀಡಿ ಗ್ರಾಮದ ಸೇವೆ ಸಲ್ಲಿಸಲು ಅಧ್ಯಕ್ಷಯಾಗಿ ಆಯ್ಕೆ ಆಗಿದ್ದು ತಮ್ಮೆಲ್ಲರ ಆರ್ಶಿರ್ವಾದ ಕಾರಣ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಮುಂಜಿ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಪರಸು ಬಿಸನಾಳ, ರಾಮಚಂದ್ರ ದೊಡ್ಡಮನಿ, ಯೊಗಪ್ಪ ಹೋರಪೇಟಿ, ಜಕ್ಕಪ್ಪ ಹತ್ತಳ್ಳಿ, ಬಸವರಾಜ ಅವಟಿ, ಮಾಸೀಮ ಚಿಕ್ಕಗಸಿ, ಮಹ್ಮದ ದಡೇದ, ರವಿ ನಡಗಡ್ಡಿ, ಚಿದಾನಂದ ಗೌಡಗಾವಿ, ಆರ್.ಎಸ್.ಪುಜೇರಿ. ಹೊನ್ನಪ್ಪ ಕಳ್ಳಿ, ಮುನ್ನ ನಾಗಠಾಣ, ಜೈಭೀಮ ರೂಗಿ, ಯು.ಡಿ.ನಾಟಿಕಾರ ಅನೇಕರು ಉಸ್ಥಿತರಿದ್ದರು.
ತಾಂಬಾ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಕಾಂಪೌಡ ಕಟ್ಟಡದ ನಿರ್ಮಾಣದ ಭೂಮಿ ಪೂಜಾ ಸಮಾರಂಭ ನೆರವೇರಿಸುತ್ತಿರುವುದು.