ವಿಜಯಪುರ : ಅಂತರ್ ರಾಜ್ಯ ಸಿಗರೇಟ್ ಹಾಗೂ ವಾಹನ ಕಳ್ಳರನ್ನು ಬಂಧಿಸಲಾಗಿದೆ ಎಂದು ನಗರದಲ್ಲಿ ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಮ್ಮದ್‌ರೇಹಾನ್ ಶೇಖ್, ರಾಮ ಚೌಧರಿ, ತೇಜಸ್ ಉನೇಚ್, ಚೇತನ ಜಾಟ, ದೀಪಾ ಜಾಟ್ ಬಂಧಿತರು. ಅಲ್ಲದೇ, ಬಂಧಿತರಿಂದ ಎರಡು ಕಾರು, ಒಂದು ಗೂಡ್ಸ್ ವಾಹನ, ವಿವಿಧ ಕಂಪನಿಯ ಸಿಗರೇಟ್ ಸೇರಿದಂತೆ 61,49,514 ಮೌಲ್ಯದ ವಸ್ತುಗಳನ್ನು ಜಪ್ತಿಗೈದಿದ್ದಾರೆ. ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.