ಕಲಿಕೆಯ ಜೊತೆ ಕೌಶಲ್ಯ ಕುರಿತು ಪ್ರಗತಿ ಪರಿಶೀಲನೆ
ವಿಜಯಪುರ,ಮೇ.09 : ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕಲಿಕೆಯ ಜೊತೆ ಕೌಶಲ್ಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ ಅವರ ಅಧ್ಯಕ್ಷತೆಯಲ್ಲಿ ಗೂಗಲ್ ಮೀಟ್ ಮೂಲ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಕÀರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವತಿಯಿಂದ 7 ವಿಶ್ವ ವಿದ್ಯಾಲಯಗಳಡಿ 17 ಪ್ರಥಮ ದರ್ಜೆ ಮಹಿಳಾ ಸರ್ಕಾರಿ ಕಾಲೇಜ್‍ಗಳಲ್ಲಿ ಕಲಿಕೆಯ ಜೊತೆ ಕೌಶಲ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಡಿಜಿಟಲ್ ಮಾರ್ಕೆಟಿಂಗ್, ಫಂಡಾಮೆಂಟಲ್ ಆಫ್ ಬಿಸಿನೆಸ್ ಅನಾಲೆಟಿಕ್ಸ್, ಕಂಟೆಂಟ್ ಆಂಡ್ ಕಮ್ಯುನಿಕೇಶನ್, ಡಾಟಾ ಅನಾಲೈಸಿಸ್& ವಿಜ್ಯೂವಲೈಜೇಶನ್, ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಆಂಡ್ ಮಶಿನ್ ಲರ್ನಿಂಗ್, ಅನಿಮೇಶನ್ ಸಪ್ಲೈ ಚೇನ್ ಮ್ಯಾನೇಜ್‍ಮೆಂಟ್, ಜಿಎಸ್‍ಟಿ ಅಕೌಂಟಿಂಗ್ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯಲು ಪ್ರೇರೆಪಿಸಿ, ಪ್ರೊತ್ಸಾಹಿಸುವಂತೆ ಹಾಗೂ ಈ ಯೋಜನೆ ಕುರಿತು ವ್ಯಾಪಕವಾಗಿ ಪ್ರಚಾರ ಹಮ್ಮಿಕೊಳ್ಳುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಪ್ರಭಾರಿ ಕುಲಪತಿಗಳಾದ ಪ್ರೊಫೆಸರ್ ಶಾಂತಾದೇವಿ ಟಿ., ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸಿ.ಬಿ.ಕುಂಬಾರ ಸೇರಿದಂತೆ ವಿವಿಧ ಕಾಲೇಜ್ ಪ್ರಾಚಾರ್ಯರು, ಸಂಯೋಜಕ ಉಪನ್ಯಾಸಕರು, ಕೈಗಾರಿಕೆ ಪ್ರತಿನಿಧಿಗಳು ಉಪಸ್ಥಿತರಿದ್ದರು.